ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: 'ಅಂಬೇಡ್ಕರ್ ಕಾರ್ಮಿಕರ ಕುರಿತು ತುಂಬಾ ಕಾಳಜಿ ವಹಿಸಿದ್ದರು'

ಬ್ರಹ್ಮಾವರ : ಮೇ 1 ಕಾರ್ಮಿಕ ದಿನಾಚರಣೆ ಅಂಗವಾಗಿ ಸಿಐಟಿಯು ವತಿಯಿಂದ ಹ್ಮಾವರದ ಆಕಾಶವಾಣಿ ವೃತ್ತದ ಬಳಿಯಿಂದ ಹಳೆ ಪೊಲೀಸ್ ಠಾಣೆಯ ತನಕ ರಥ ಬೀದಿ ಮೂಲಕ ಕಾರ್ಮಿಕ ಸಂಘಟನೆಗಳ ಜಾಥಾ ಬುಧವಾರ ಸಂಜೆ ನಡೆಯಿತು.

ಬಳಿಕ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಸಿ ಐ ಟಿ ಯು ರಾಜ್ಯ ಉಪಾಧ್ಯಕ್ಷ ಕೆ ಪ್ರಕಾಶ್ ಮಾತನಾಡಿ ಡಾ, ಬಿ. ಆರ್. ಅಂಬೆಡ್ಕರ್‌ರವರು ದೇಶದ ಕಾರ್ಮಿಕರ ಕುರಿತುಕೂಡಾ ತುಂಬಾ ಕಾಳಜಿವಹಿಸಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕದ ಭದ್ರಾವತಿ ಉಕ್ಕಿನ ಕಾರ್ಖಾನೆಯಲ್ಲಿ ಕಾರ್ಮಿಕ ದಿನಾಚರಣೆ ಆರಂಭಗೊಂಡಿತ್ತು ಮತ್ತು ಅಂದು ದೇಶದ ಆಡಳಿತದ ಕಾರ್ಮಿಕ ಶಕ್ತಿಯ ದಮನ ನೀತಿಯಿಂದ ಮೂರು ಮಂದಿ ಪ್ರಾಣ ತೆತ್ತಿದ್ದರು. ನಮ್ಮದೆ ಪ್ರಜಾಪ್ರಭುತ್ವ ಆಡಳಿತದಲ್ಲಿ ಇಂದಿಗೂ ಕೂಡಾ ಕಾರ್ಮಿಕರ ಅನೇಕ ಬೇಡಿಕೆಗಳು ಈಡೇರಿಲ್ಲ ಎಂದರು.

ನಾನಾ ಕಾರ್ಮಿಕ ಸಂಘಟನೆಗಳ ಮುಖಂಡರುಗಳಾದ ಬಾಲಕೃಷ್ಣ ಶೆಟ್ಟಿ, ಸುಭಾಶ್ ನಾಯ್ಕ್, ವೆಂಕಟೇಶ್ ಕೋಣಿ, ಶಶಿಧರ ಗೊಲ್ಲ, ಗೊಡ್ವಿನ್, ಚಂದ್ರ ನಾಯ್ಕ್ , ಸಯ್ಯದ್, ಇನ್ನಿತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

02/05/2024 11:02 am

Cinque Terre

2.58 K

Cinque Terre

0

ಸಂಬಂಧಿತ ಸುದ್ದಿ