ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಉತ್ತರಪ್ರದೇಶ ಮೂಲದ ಮಹಿಳೆ ಒಂದು ವರ್ಷದ ಮಗುವಿನೊಂದಿಗೆ ನಾಪತ್ತೆ

ಮಂಗಳೂರು: ಉಪ್ಪಿನಂಗಡಿಯ ಕೌಕ್ರಾಡಿ ಗ್ರಾಮದ ಕಟ್ಟೆಮಜಲು ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಉತ್ತರಪ್ರದೇಶ ಮೂಲದ ಮಹಿಳೆ ತನ್ನ ಒಂದು ವರ್ಷದ ಮಗುವಿನೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋನು ಸೋಂಕರ್‌ ಎಂಬವರ ಪತ್ನಿ ರೀಮಾ ಸೋಂಕರ್‌ (26) ಮತ್ತು ಮಗು ರಿಯಾ (1) ನಾಪತ್ತೆಯಾದವರು.

ಇಂಟೀರಿಯರ್‌ ಡೆಕೊರೇಟರ್‌ ಆಗಿರುವ ಸೋನು ಸೋಂಕರ್‌ ಉತ್ತರಪ್ರದೇಶದ ಅಜಾಮ್‌ ಘರ್‌ ಜಿಲ್ಲೆಯ ಅಮಹಾಮಾಫಿ ಗ್ರಾಮದ ನಿವಾಸಿ. ಇವರು ಕೌಕ್ರಾಡಿಯಲ್ಲಿ ಕೃಷ್ಣಪ್ಪ ಎಂಬವರ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಎ.22ರಂದು ಬೆಳಗ್ಗೆ ಸೋನು ಕೆಲಸಕ್ಕೆಂದು ಹೋಗಿದ್ದರು. ಆದರೆ ಸಂಜೆ ಮರಳಿ ಬಂದಾಗ ಮನೆಯ ಬಾಗಿಲಿಗೆ ಬೀಗ ಹಾಕಿ ಪತ್ನಿ, ಮಗು ನಾಪತ್ತೆಯಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

Edited By : Nirmala Aralikatti
Kshetra Samachara

Kshetra Samachara

01/05/2024 03:27 pm

Cinque Terre

4.03 K

Cinque Terre

0