ಬೆಂಗಳೂರು : ಆತ ದುಡ್ಕೊಂಡ್ ತಿನ್ನೋ ವ್ಯಕ್ತಿ. ಖಾಸಗಿ ಕಂಪನಿಯಲ್ಲಿ ಕೆಲಸ, ಸಂಸಾರ ನಡೆಸೋವಷ್ಟು ಸಂಬಳ. ಕಷ್ಟಪಟ್ಟು ಹೆಂಡತಿಯನ್ನ ನೋಡ್ಕೋತಿದ್ದ. ಆದ್ರೆ ಇದ್ದಕ್ಕಿದ್ದಂತೆ ನಿನ್ನೆ ತಮ್ಮನೆಯ ಬಾತ್ ರೂಮ್ ನಲ್ಲಿ ಶವವಾಗಿದ್ದ. ಆ ಸಾವಿನ ಸುದ್ದಿಯ ಹಿಂದೆ ಈಗ ಸಾಕಷ್ಟು ಶಂಕೆ ವ್ಯಕ್ತವಾಗಿತ್ತು ಸದ್ಯ ಪೊಲೀಸ್ರು ಆ ಅನುಮಾನಕ್ಕೆ ಪರಿಹಾರ ನೀಡಿದ್ದಾರೆ.
ಬುಧವಾರ ಮುಂಜಾನೆಯೇ ಹೆಚ್ ಎಸ್ ಆರ್ ಲೇಔಟ್ ಠಾಣೆಗೆ ಫೋನ್ ಮಾಡಿ ಮಾತನಾಡಿದ್ದ ಮಹಿಳೆ ಬಾತ್ ರೂಮ್ ನಲ್ಲಿ ಜಾರಿ ಬಿದ್ದ ನನ್ನ ಗಂಡ ಸತ್ತೋದಾ ಸಾರ್ ಅಂತಾ ಅಳುತ್ತಾ ಪೊಲೀಸ್ರಿಗೆ ಕರೆ ಮಾಡಿದ್ದಾಳೆ. ಕೂಡಲೇ ಸ್ಥಳಕ್ಕೆ ಹೋದ ಪೊಲೀಸರಿಗೆ ಶುರುವಿನಲ್ಲಿಯೇ ಅನುಮಾನ ಮೂಡಿತ್ತು. ಕ್ರೈಂ ಸೀನ್ ಇನ್ಸ್ಪೆಕ್ಟ್ ಮಾಡ್ದಾಗ ಇದೊಂದು ಮರ್ಡರ್ ಕೇಸ್ ಅನ್ನೋದು ಗೊತ್ತಾಗಿದೆ.
ಅಂದ್ಹಾಗೆ ಇಲ್ಲಿ ಕೊಲೆಯಾಗಿರೋದು 35 ವರ್ಷದ ವೆಂಕಟರಮಣ.v ಹೆಚ್ ಎಸ್ ಆರ್ ಲೇಔಟ್ ಠಾಣಾ ವ್ಯಾಪ್ತಿಯ ಕ್ರೋಮಾ ಸ್ಟೋರ್ ನಲ್ಲಿ ಕೆಲಸ ಮಾಡ್ತಿದ್ದಾತನಿಗೆ ಮದುವೆಯಾಗಿತ್ತು. ಆಂಧ್ರದಿಂದ ಪತ್ನಿ ಜೊತೆ ಬಂದಿದ್ದವ್ರು ಮನೆಯೊಂದರಲ್ಲಿ ಕೆಲಸಕ್ಕೆ ಅಂತಾ ಸೇರಿದ್ರು. ಪತ್ನಿ ಈ ಮನೆ ಕೆಲಸ ಮಾಡ್ತಿದ್ರೆ ವೆಂಕಟರಮಣ ಹಗಲು ಕ್ರೋಮಾದಲ್ಲಿ ಕೆಲಸ ಮುಗಿಸಿಕೊಂಡು ಇದೇ ಮನೆಗೆ ಬಂದು ರಾತ್ರಿ ಸೆಕ್ಯೂರಿಟಿಯಾಗಿ ಇದೇ ಮನೆಯಲ್ಲಿ ಕೆಲಸ ಮಾಡ್ತಿದ್ದ. ಆದ್ರೆ ಮೊನ್ನೆ ಮಧ್ಯರಾತ್ರಿ ಸುಮಾರಿಗೆ ಇದ್ದಕ್ಕಿದ್ದಂತೆ ಬಾತ್ ರೂಮ್ ನಲ್ಲಿ ಸಾವನ್ನಪ್ಪಿದ್ದಾನೆ ಅಂತಾ ಈತನ ಪತ್ನಿಯೇ ಸ್ವತಃ ಪೊಲೀಸರಿಗೆ ಕಾಲ್ ಮಾಡಿ ತಿಳಿಸಿದ್ದಾಳೆ.
ಈ ಕೊಲೆಯ ಹಿಂದೆ ಪೊಲೀಸರಿಗಂತೂ ಹಲವು ಅನುಮಾನಗಳು ಮೂಡಿವೆ. ಮನೆಯಲ್ಲಿಯೇ ಕೊಲೆ ನಡೆದಿರೋ ಹಿನ್ನೆಲೆ ಪತ್ನಿಯನ್ನ ತೀವ್ರ ವಿಚಾರಣೆ ನಡೆಸ್ತಿದ್ದಾರೆ. ಈ ಮರ್ಡರ್ ಕೇಸ್ ನಲ್ಲಿ ಮತ್ತೋರ್ವ ವ್ಯಕ್ತಿಯ ಕೈವಾಡ ಇದೇ ಅನ್ನೋದು ಪೊಲೀಸ್ರ ಸಂಶಯ ಅದೇ ನಿದ್ರು ತನಿಖೆ ನಂತರವೇ ಮರ್ಡರ್ ಮಿಸ್ಟ್ರಿ ಗೊತ್ತಾಗಬೇಕಿದೆ.
Kshetra Samachara
11/01/2024 10:11 pm