ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಕೆಶಿ ಆಪ್ತನಿಗೆ ಒಲಿದ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟ - ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಂಜುನಾಥ್ ಗೌಡ ಆಯ್ಕೆ

ಬೆಂಗಳೂರು : ಯುವ ಕಾಂಗ್ರೆಸ್ ಚುನಾವಣಾ ಫಲಿತಾಂಶ ಪ್ರಕಟವಾಗಿದೆ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಂಜುನಾಥ್ ಗೌಡ್ ಹೆಚ್ಎಸ್ ಆಯ್ಕೆ ಯಾಗಿದ್ದಾರೆ. ಮಂಜುನಾಥ್ ಗೌಡ 2.7 ಲಕ್ಷ ಮತಗಳ ಅಂತರದಿಂದ ಭರ್ಜರಿ ಗೆಲವು ಸಾಧಿಸಿದ್ದಾರೆ. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಂಜುನಾಥ್ ಗೌಡ ಮತ್ತು ದೀಪಿಕಾ ರೆಡ್ಡಿ ನಡುವೆ ಪೈಪೋಟಿ ನಡೆದಿತ್ತು. ಭರ್ಜರಿ ಮತ ಗಳಿಸುವ ಮೂಲಕ ಮಂಜುನಾಥ್ ಜಯಭೇರಿಯಾಗಿದ್ದಾರೆ.

ಮಂಜುನಾಥ್ ಪಡೆದ ಮತ - 5,67,343, ದೀಪಿಕಾ ರೆಡ್ಡಿ ಪಡೆದ ಮತ - 2,95,705 ಒಟ್ಟು 2.7 ಲಕ್ಷ ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದಾರೆ.

ಮಂಜುನಾಥ್ ಗೌಡ ಡಿಸಿಎಂ ಡಿಕೆಶಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.

Edited By : Nagaraj Tulugeri
PublicNext

PublicNext

07/02/2025 09:47 pm

Cinque Terre

27.8 K

Cinque Terre

0