ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡು: ವಿಚಿತ್ರ ರೂಪ ಹೊಂದಿದ ಮಗು ಜನನ.. ವೈದ್ಯ ಲೋಕಕ್ಕೆ ಸವಾಲಾದ ಪ್ರಕರಣ..!

ನಂಜನಗೂಡು: ವೈದ್ಯ ಲೋಕವನ್ನೇ ಬೆರಗಾಗುವಂತಹ ರೂಪ ಹೊಂದಿದ ಮಗುವೊಂದು ನಂಜನಗೂಡಿನ ಹುರಾ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ್ದು, ಇಡೀ ಆರೋಗ್ಯ ಇಲಾಖೆಯನ್ನೇ ಬೆಚ್ಚಿ ಬೀಳಿಸಿದೆ.

ವಿಚಿತ್ರವಾದ ಕಣ್ಣು ಮತ್ತು ತುಟಿ, ಮೈಯೆಲ್ಲಾ ಇದ್ದಲಿನಂತೆ ಕಪ್ಪು ಬಣ್ಣದ ಮಗುವನ್ನು ಕಂಡು ಆರೋಗ್ಯ ಇಲಾಖೆ ಆಶ್ಚರ್ಯಗೊಂಡಿದೆ. ಹುರ ಗ್ರಾಮದ ದಂಪತಿಗೆ ಇಂತಹ ಅಪರೂಪ ಹೊಂದಿರುವ ಮಗು ಹುಟ್ಟಿದೆ. ಮಗುವಿನ ಆಕಾರ ಮತ್ತು ರೂಪಕ್ಕೆ ಗ್ರಾಮಸ್ಥರು ಮತ್ತು ದಂಪತಿ, ಕುಟುಂಬಸ್ಥರು ಶಾಕ್ ಆಗಿದ್ದಾರೆ.

ಕೆಲವೇ ಗಂಟೆಗಳ ಹಿಂದೆ ಹುಟ್ಟಿದ ಮಗುವನ್ನು ಉಳಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ವಿಚಿತ್ರ ರೂಪದ ಮಗುವನ್ನು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಏಳು ದಿನಗಳ ಕಾಲ ತುರ್ತು ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಿದ್ದಾರೆ.

ಕಳೆದ ವರ್ಷಗಳ ಇದೇ ದಂಪತಿ ಇಂತದ್ದೇ ರೂಪ ಹೊಂದಿದ ಮಗುವಿಗೆ ಜನ್ಮ ನೀಡಿತ್ತು. ನಾಲ್ಕೈದು ದಿನಗಳ ಸಾವನ್ನಪ್ಪಿತ್ತು. ಮತ್ತೆ ಈ ಬಾರಿಯೂ ಕೂಡ ಇದೇ ರೀತಿ ಇಡೀ ಕುಟುಂಬವನ್ನು ಬೆಚ್ಚಿ ಬೀಳಿಸುವಂತಹ ವಿಚಿತ್ರ ಮಗು ಜನಿಸಿದೆ.

ಈ ಹಿಂದೆ ನಡೆದ ಪ್ರಕರಣದ ನಂತರ ಆರೋಗ್ಯ ಇಲಾಖೆ ನೀಡಿದ್ದ ಸಲಹೆ ಸೂಚನೆಗಳನ್ನ ದಂಪತಿ ಪಾಲಿಸಿಲ್ಲ ಎಂದು ಹೇಳಲಾಗಿದೆ. ವಿಸ್ಮಯವಾದ ಮಗುವಿನ ಜನನ, ವೈದ್ಯಲೋಕಕ್ಕೆ ಸವಾಲು ಎನ್ನುವಂತಾಗಿದೆ.

Edited By : Manjunath H D
PublicNext

PublicNext

05/02/2025 09:57 pm

Cinque Terre

14.09 K

Cinque Terre

0

ಸಂಬಂಧಿತ ಸುದ್ದಿ