ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ವಕೀಲರ ಸ್ವಾಭಿಮಾನಕ್ಕೆ ಧಕ್ಕೆ- ಎಸಿ ವಿರುದ್ಧ ವಕೀಲರ ಪ್ರತಿಭಟನೆ

ಕೋಲಾರ : ಕಂದಾಯ ನ್ಯಾಯಾಲಯದಿಂದ ಹೊರ ನಡೆಯಿರಿ ಎಂದು ವಕೀಲರಿಗೆ ಅಗೌರವ ತೋರಿದ್ದಾರೆ ಎಂದು ಉಪವಿಭಾಗಾಧಿಕಾರಿ ಮೈತ್ರಿ ವಿರುದ್ಧ ನಗರದ ಎಸಿ ಕಚೇರಿ ಮುಂದೆ ಜಿಲ್ಲಾ ವಕೀಲರ ಸಂಘ ದಿಂದ ಪ್ರತಿಭಟನೆ ನಡೆಸಲಾಯಿತು. ಕಲಾಪವನ್ನು ಬಹಿಷ್ಕರಿಸಿ , ನ್ಯಾಯಾಲಯದಿಂದ ವಕೀಲರು ಮೆರವಣಿಗೆ ಮೂಲಕ ಎಸಿ ಕಛೇರಿಗೆ ಬಂದು ಅಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿ, ಕೂಡಲೇ ಕ್ಷಮೆಯಾಚಿಸಬೇಕೆಂದು ನೂರಾರು ವಕೀಲರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮುನೇಗೌಡ, ಕಂದಾಯ ನ್ಯಾಯಾಲಯದದಲ್ಲಿ ಕಲಾಪ ನಡೆಸುವ ಸಮಯದಲ್ಲಿ ಉಪವಿಭಾಗಾಧಿಕಾರಿ ಮೈತ್ರಿಯವರು ಜೂನಿಯರ್ ವಕೀಲರನ್ನು ನ್ಯಾಯಾಲಯದಿಂದ ಹೊರ ನಡೆಯಿರಿ ಎಂದು ಏಕವಚನದಲ್ಲಿ ಗದರಿದ್ದಾರೆ. ಅಧಿಕಾರಿಯಾಗಿ ಈ ರೀತಿ ನಡೆದುಕೊಳ್ಳುವುದು ಇವರಿಗೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Edited By : PublicNext Desk
Kshetra Samachara

Kshetra Samachara

24/01/2025 07:04 pm

Cinque Terre

700

Cinque Terre

0