ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಹೋರಾಟದ ರೂಪ ಪಡೆದುಕೊಂಡ ವಿವಾದಿತ ಪಠ್ಯ

ಧಾರವಾಡ : ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಬಿಎ ಮೊದಲ ಸೆಮಿಸ್ಟರ್‍ಯನ ನಾಲ್ಕನೇ ಅಧ್ಯಾಯದಲ್ಲಿ ರಾಮಲಿಂಗಪ್ಪ‌ ಬೇಗೂರು ಎನ್ನುವವರು ಬರೆದಿರುವ ಪಠ್ಯ ವಿವಾದಕ್ಕೆ ಕಾರಣವಾಗಿದ್ದು, ಇದು ಈಗ ಹೋರಾಟದ ರೂಪ ಪಡೆದಿದೆ.

ಹೌದು! ಬೆಳಗು ಎಂಬ ಪುಸ್ತಕದಲ್ಲಿ ಭಾರತ ಮಾತೆ ಕೇವಲ‌ ಚಿತ್ರವಾಗಿದೆ, ಆ ಚಿತ್ರ ಯಾವುದೇ ಹಿಂದೂ ಮುಸ್ಲಿಂ, ಸಿಖ್, ಗೊಲ್ಲ ಕುರುಹು ಅಲ್ಲ, ಹಿಂದೂ ಎಂಬುದು ಕಲ್ಪಿತವಾಗಿದೆ, ಭಾರತ ಮಾತಾಕೀ ಎಂದು ಯಾರಾದರೂ ಕರೆದರೆ ಅದಕ್ಕೆ ಎಲ್ಲರೂ ಜೈ ಎನ್ನುತ್ತಾರೆ, ಈ ಜೈ ಎನ್ನುವ‌ ಕಲ್ಪನೆ ಇನ್ನೊಬ್ಬರ ಸೋಲು ನೆನಪಿಸುತ್ತದೆ ಎಂದು ರಾಮಲಿಂಗಪ್ಪ ಬರೆದಿದ್ದರು.

ಈ ಅಧ್ಯಾಯಕ್ಕೆ ಹಲವು ಕಡೆಯಿಂದ ವಿರೋದೆ ವ್ಯಕ್ತವಾಗುತ್ತಿದೆ. ಈ ವಿವಾದಿತ ಅಧ್ಯಾಯ ವಿರೋಧಿಸಿ ಧಾರವಾಡ ಕವಿವಿಯಲ್ಲೇ ಎಬಿವಿಪಿ ಹೋರಾಟ‌ ಹಮ್ಮಿಕೊಂಡಿತ್ತು. ಅಲ್ಲದೇ ಒಂದು ಕಡೆ ಎಬಿವಿಪಿ ಹೋರಾಟ ಮಾಡಿದ್ದೇ ತಡ, ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಬಿಜೆಪಿ ಕೂಡ ಪ್ರತಿಭಟನೆಗೆ ಇಳಿಯಿತು. ಎರಡು ಕಡೆಯಿಂದ ಪ್ರತಿಭಟನೆ ಮಾಡಿ, ಕರ್ನಾಟಕ ವಿವಿಯ ಆಡಳಿತ ಮಂಡಳಿ ಕಚೇರಿ ಎದುರೇ ವಿವಾದಿತ ಪಠ್ಯ ಹರಿದು ಹಾಕಿ ಆಕ್ರೋಶ ಹೊರಹಾಕಲಾಯಿತು. ಕವಿವಿ ಕುಲಪತಿಗಳು ಭಾರತ ಮಾತೆಗೆ ಪುಷ್ಪಾರ್ಪಣೆ ಮಾಡುವ ಮೂಲಕ ಮಾಡಿದ ತಪ್ಪಿಗೆ ಕ್ಷಮೆ ಕೇಳಬೇಕು ಎಂದು ಒತ್ತಾಯ ಮಾಡಲಾಯಿತು. ಈ ಒತ್ತಾಯಕ್ಕೆ ಮಣಿದ ಕುಲಪತಿ, ‌ಕುಲಸಚಿವರು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪಠ್ಯ ಆಯ್ಕೆ ಮಾಡಿದ ಸಮಿತಿಯವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಾಯವನ್ನೂ ಪ್ರತಿಭಟನಾಕಾರರು ಮಾಡಿದರು.

ಎರಡೂ ಕಡೆಯಿಂದಾದ ಒತ್ತಡಕ್ಕೆ ಮಣಿದ ಕವಿವಿ ಕುಲಪತಿ ಜಯಶ್ರೀ ಹಾಗೂ ಕುಲಸಚಿವರು ಪಠ್ಯದ ಬಗ್ಗೆ ಬಂದ ವರದಿ ಆಧಾರದ ಮೇಲೆ ವಿವಾದಿತ ಅಧ್ಯಾಯ ಪುಸ್ತಕದಿಂದ ಕೈ ಬಿಟ್ಟಿದ್ದೆವೆ ಎಂದು ಹೇಳಿದರು. ಅಲ್ಲದೇ ಈ ಪಠ್ಯದಲ್ಲಿ ಅಧ್ಯಾಯ ಆಯ್ಕೆ‌ ಮಾಡಿದವರ ಮೇಲೆ ಕ್ರಮ ಜರುಗಿಸಲು ಸಿಂಡಿಕೇಟ್ ಸದಸ್ಯರ ಹಾಗೂ ಡೀನ್‌ಗಳ ಸಭೆ ಮಾಡಿ ಮುಂದಿನ ಕ್ರಮ ಜರುಗಿಸುವ ಮಾತನ್ನು ಹೇಳಿದರು.

ಒಟ್ಟಿನಲ್ಲಿ ಈ ವಿವಾದಿತ ಅಧ್ಯಾಯ ಏನೋ ಪಠ್ಯದಿಂದ ಹೊರ ಹೋಗಿದೆ. ಆದರೆ ವಿವಾದಿತ ಪಠ್ಯ ಆಯ್ಕೆ ಮಾಡಿದವರ‌ ಮೇಲೆ ಕರ್ನಾಟಕ ವಿವಿ ಏನು ಕ್ರಮ ಕೈಗೊಳ್ಳಲಿದೆ ಎಂದ ವಿವಿಯ ಆಡಳಿತ ಮಂಡಳಿಯೇ ಹೇಳಬೇಕಾಗಿದೆ.‌

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/01/2025 06:31 pm

Cinque Terre

97.05 K

Cinque Terre

3

ಸಂಬಂಧಿತ ಸುದ್ದಿ