ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಪಾರ್ಶ್ವನಾಥ ತೀರ್ಥಂಕರ ಆದರ್ಶ ಅಳವಡಿಕೆಯಿಂದ ಉತ್ತಮ ಜೀವನ ಸಾಧ್ಯ - ಓಂಪ್ರಕಾಶ್ ಬಿರ್ಲಾ..!

ಹುಬ್ಬಳ್ಳಿ : ಪಾರ್ಶ್ವನಾಥ ತೀರ್ಥಂಕರರ ಶಾಂತಿ, ಅಹಿಂಸೆಯ ಸಂದೇಶಗಳನ್ನು ಸಾರ್ವಜನಿಕರು ತಮ್ಮ ಅಮೂಲ್ಯ ಜೀವನದಲ್ಲಿ ಅಳವಡಿಸಿಕೊಂಡು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಲೋಕಸಭಾ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಹೇಳಿದರು.

ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿಯೇ ಕಲ್ಯಾಣ ಮಾರ್ಗವನ್ನು ಕಂಡುಕೊಳ್ಳುವ ಸುಸಂದರ್ಭ. ಭೂಮಿಯ ಮೇಲೆ ಆಧ್ಯಾತ್ಮಿಕವಾಗಿ ಬಹುದೊಡ್ಡ ಕ್ರಾಂತಿ‌ ಮಾಡಿದವರು ಕುಂತುಸಾಗರ ಮಹಾರಾಜರು. ಸಾಮಾಜಿಕ ಜೀವನದಲ್ಲಿ ಜನರ ಪರಿವರ್ತನೆ ಮಾಡುವ ಬಹುದೊಡ್ಡ ಮಾರ್ಗದಲ್ಲಿ ಜೈನ ಮುನಿಗಳು ಕಾರ್ಯ ಮಾಡುತ್ತಿದ್ದಾರೆ. ಆಚಾರ್ಯ ಗುಣಧರನಂದಿ ಮಹಾರಾಜರ ಆಮಂತ್ರಣದ ಮೇಲೆ ಬಂದಿದ್ದೇನೆ. ಅವರ ಆಶೀರ್ವಾದ ಆಗಿರುವುದು ನಿಜಕ್ಕೂ ನನ್ನ ಪುಣ್ಯ ಎಂದರು.

ಆಚಾರ್ಯರ ದರ್ಶನ, ಪ್ರವಚನ ಆಧ್ಯಾತ್ಮಿಕದ ಹಂಬಲದಿಂದ ಬಂದಿದ್ದೇನೆ. ದೇಶದಲ್ಲಿ ಸಾಕಷ್ಟು ದಾಂದಲೆ ಗಲಾಟೆ ನಡೆಯುತ್ತಿವೆ. ಆದರೆ ಜನರು ಭಗವಾನ್ ಮಹಾವೀರರ ಆದರ್ಶಗಳನ್ನು ಅರ್ಥ ಮಾಡಿಕೊಳ್ಳಬೇಕು. ಪಾರ್ಶ್ವನಾಥರ ಸಂದೇಶ ವಿಶ್ವದಲ್ಲಿ ಶಾಂತಿ ನೆಲೆ ನಿಲ್ಲಬೇಕು. ಅಹಿಂಸೆ, ಸತ್ಯ, ಸಮರ್ಪಣೆ, ಸೇವಾ,‌ತ್ಯಾಗದ ಪ್ರತೀಕವಾಗಿ ಪಾರ್ಶ್ವನಾಥರ ವಿಚಾರಗಳಿವೆ. ಸಾತ್ವಿಕ, ಆಧ್ಯಾತ್ಮಿಕ, ಅನುಕರಣಿಯ ಜೀವನ ನಡೆಸುವುದು ಮನಷ್ಯ ಜೀವನದ ಮಹತ್ವ ಘಟ್ಟ ಎಂದು ಅವರು ಸಲಹೆ ನೀಡಿದರು.

ಜೀವನದಲ್ಲಿ ಸಾರ್ಥಕತೆಯನ್ನು ಕಂಡ ಸಾಧಕರ ದರ್ಶನ ಮಾಡುವುದು ಅಗತ್ಯ. ವೈಚಾರಿಕ ಸಂಘರ್ಷದಲ್ಲಿ ಸಮಾಧಾನದಿಂದ ಇರಬೇಕು. ಸಂತ ಮಹಾಂತರ ದರ್ಶನದಿಂದ ಶಾಂತಿ ಸಹನೆ ಮನದಲ್ಲಿ ನೆಲೆ ನಿಲ್ಲುವಂತೆ ಮಾಡಬೇಕು. ಪಾರ್ಶ್ವನಾಥರ ವಿಚಾರ ಅಹಿಂಸೆಯ ಬಗ್ಗೆಯೇ ಹೆಚ್ಚಾಗಿ ಪ್ರಭಾವ ಬೀರುವಂತಿದೆ. ಹಿಂಸೆ ಮಾಡುವುದನ್ನು ಬಿಟ್ಟು ಸಮಾಧಾನದಿಂದ ಒಂದು ಕ್ಷಣ ಮನಪರಿವರ್ತನೆ ಮಾಡಿದರೇ ಶಾಂತಿ ನೆಲೆಸುತ್ತದೆ ಎಂದು ಅವರು ಹೇಳಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/01/2025 06:24 pm

Cinque Terre

58.75 K

Cinque Terre

0

ಸಂಬಂಧಿತ ಸುದ್ದಿ