", "articleSection": "Health & Fitness,Crime,Law and Order,News,Public News,LadiesCorner", "image": { "@type": "ImageObject", "url": "https://prod.cdn.publicnext.com/s3fs-public/421698-1737528230-V1~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "RohitMadakeri" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಡಿಕೇರಿ: ಸಂತಾನ ಹರಣ ಶಸ್ತ್ರಚಿಕಿತ್ಸೆಗೆಂದು ಬಂದಿದ್ದ 2 ತಿಂಗಳ ಬಾಣಂತಿಯೊಬ್ಬರು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಮೃತ ಶಾಂತಿಯ ಅಜ್ಜಿ ...Read more" } ", "keywords": ",Kodagu,Health-and-Fitness,Crime,Law-and-Order,News,Public-News,LadiesCorner", "url": "https://publicnext.com/node" }
ಮಡಿಕೇರಿ: ಸಂತಾನ ಹರಣ ಶಸ್ತ್ರಚಿಕಿತ್ಸೆಗೆಂದು ಬಂದಿದ್ದ 2 ತಿಂಗಳ ಬಾಣಂತಿಯೊಬ್ಬರು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಮೃತ ಶಾಂತಿಯ ಅಜ್ಜಿ ಎಸ್ಪಿ ಕಾಲಿಗೆ ಬಿದ್ದು ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.
ಬಾಣಂತಿ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಮಡಿಕೇರಿಯ ಆಸ್ಪತ್ರೆಯ ಶವಾಗಾರಕ್ಕೆ ಆಗಮಿಸಿದ ಕುಟುಂಬಸ್ಥರು ಹಾಗೂ ಸಂಬಂಧಿಕರು ವೈದ್ಯರ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ವೈದ್ಯರ ನಿರ್ಲಕ್ಷ್ಯವೆ ಇದಕ್ಕೆ ಕಾರಣ. ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮಜರುಗಿಸುವಂತೆ ಬಾಣಂತಿಯ ಸಾವಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ರು. ತಡರಾತ್ರಿಯಾದ್ರೂ ಮಹಿಳೆಯ ಮರಣೋತ್ತರ ಪರೀಕ್ಷೆ ಮಾಡಲು ಹಿಂದೇಟು ಹಾಕಿದ್ರು.
ನಾವು ಬೇರೆಯೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡೋದಾಗಿ ಹರ ಹಿಡಿದ್ರು. ಸ್ಥಳಕ್ಕಾಗಮಿಸಿದ ಕೊಡಗು ಎಸ್ಪಿ ರಾಮರಾಜನ್ ಒಂದು ವೇಳೆ ವೈದ್ಯರಿಂದಲೇ ತಪ್ಪಾಗಿದಲ್ಲಿ ಕ್ರಮ ಕೈಗೊಳ್ಳುವ ಭರವಸೆಯನ್ನ ಕುಟುಂಬಸ್ಥರಿಗೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ರು. ತಡರಾತ್ರಿಯಾದ್ರು ಕೂಡ ಖುದ್ದು ಕೊಡಗು ಎಸ್ಪಿ ರಾಮರಾಜನ್ ಮರಣೋತ್ತರ ಪರೀಕ್ಷೆವೇಳೆ ಉಪಸ್ಥಿತರಿದ್ರು. ತಡರಾತ್ರಿ ಬಾಣಂತಿಯ ಮರಣೋತ್ತರ ಪರೀಕ್ಷೆ ನಡೆಸಿ ಬಾಣಂತಿಯ ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿದು. ಆದ್ರೆ ಏನೂ ಅರಿಯ ಎರಡು ಕಂದಮ್ಮಗಳು ಮಾತ್ರ ತಾಯಿಯನ್ನ ಕಳೆದುಕೊಂಡು ತಬ್ಬಲಿಗಳಾಗಿವೆ.
PublicNext
22/01/2025 12:13 pm