ರಾಮನಗರ : ತಾಲ್ಲೂಕಿನ ಕೂನಮುದ್ದನಹಳ್ಳಿ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ ಕಿರುಕುಳಕ್ಕೆ ಸಾಲ ಮರುಪಾವತಿ ಮಾಡಲು ಆಗದೆ 8 ಕುಟುಂಬಗಳು ಗ್ರಾಮ ತೊರೆದು ಬಗ್ಗೆ ಮೈಕ್ರೋ ಫೈನಾನ್ಸ ಬ್ರಾಂಚ್ ಮೆನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಡದಿಯ ಖಾಸಗಿ ಮೈಕ್ರೋ ಫೈನಾನ್ಸ ರವರು ತಾಲ್ಲೂಕಿನ ಕೂನಮುದ್ದನಹಳ್ಳಿ ಗ್ರಾಮಕ್ಕೆ ಬಂದು 7-8 ಜನರಿರುವ ಗುಂಪನ್ನು ಮಾಡಿ ನಾವು ನಿಮಗೆ ಸಾಲ ನೀಡುತ್ತೆವೆ ಎಂದು ಹೇಳಿದ್ದು. ಅದರಂತೆ ಗ್ರಾಮದ 7 ಮಂದಿ ಸೇರಿ ಗುಂಪನ್ನು ಮಾಡಿಕೊಂಡು 52 ಸಾವಿರ ಸಾಲವನ್ನು ಪಡೆದು ಅದರಂತೆ ಸಾಲವನ್ನು ಪಡೆದ ಗುಂಪಿನವರು ಪ್ರತಿ ತಿಂಗಳು ಮೊದಲ ವಾರದಲ್ಲಿ 2810 ರೂ. ಗಳನ್ನು ಕಟ್ಟುತ್ತಿದ್ದಳು.
ಕಳೆದ 3 ತಿಂಗಳಿಂದ ಹಣಕಾಸಿನ ತೊಂದರೆಯಿಂದ ಸಾಲ ಪಡೆದ ಮೈಕ್ರೋ ಫೈನಾನ್ಸ ರವರಿಗೆ ಕಂತು ಕಟ್ಟಲು ಆಗಿರುವುದಿಲ್ಲ. ಈ ಸಂಬಂಧವಾಗಿ ಬಿಡದಿಯ ಖಾಸಗಿ ಮೈಕ್ರೋ ಫೈನಾನ್ಸ ಬ್ರಾಂಚ್ ಮ್ಯಾನೇಜರ್ ರಘು ಕಳೆದ ತಿಂಗಳು ಗ್ರಾಮಕ್ಕೆ ಬಂದು ಸಾಲ ವಾಪಸ್ ಕಟ್ಟುವಂತೆ ಬೆದರಿಕೆ ಹಾಕಿ ನಿಂದಿಸಿದ್ದಾನೆ. ಅಲ್ಲದೆ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ತೊಂದರೆ ನೀಡಿದ ಪರಿಣಾಮ 8 ಕುಟುಂಬಗಳು ಮನೆಗೆ ಬೀಗ ಹಾಕಿ ಊರು ಬಿಟ್ಟಿದ್ದರು.
ಈ ಬಗ್ಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೈಕ್ರೋ ಫೈನಾನ್ಸ್ ನಿಂದ ಸಾಲ ಪಡೆದು ಊರು ತೊರೆದ್ದಿದ್ದ ಕುಟುಂಬದವರು ದೂರು ನೀಡಿದ್ದರು. ದೂರು ದಾಖಲು ಮಾಡಿ ಕೊಂಡು ಪೊಲೀಸರು ತನಿಖೆ ಕೈಗೊಂಡು ಸದರಿ ಪ್ರಕರಣದ ಆರೋಪಿಯಾದ ಬಿಡದಿಯ ಖಾಸಗಿ ಮೈಕ್ರೋ ಫೈನಾನ್ಸ ಬ್ರಾಂಚ್ ಮ್ಯಾನೇಜರ್ ರಘು ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Kshetra Samachara
20/01/2025 08:41 pm