ಮಂಡ್ಯ; ಕಾಲೇಜು ಮುಗಿಸಿ ತಮ್ಮ ಆಕ್ಟೀವಾದಲ್ಲಿ ಮನೆಗೆ ತೆರಳಿದ್ದ ಶಿಕ್ಷಕಿಯೋರ್ವರಿಗೆ ನಿಂತಿದ್ದ ಕಾರನ್ನ ಹಿಂತಿರುಗಿಸಿ ಗುದ್ದಿ, ಗಾಯಗೊಂಡ ಅವರನ್ನ ಗಮನಿಸದೇ ಅವರ ಆಕ್ಟಿವಾವನ್ನ ಹತ್ತಿರ ಇದ್ದ ಗ್ಯಾರೇಜ್ ಗೆ ತಳ್ಳಿ ಪರಾರಿಯಾಗುತ್ತಿದ್ದ ಇಬ್ಬರು ಮುಸ್ಲಿಂ ಯುವಕರನ್ನ ಸಾರ್ವಜನಿಕರು ಅಡ್ಡಗಟ್ಟಿ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಘಟನೆ ಮಂಡ್ಯ ಸಮೀಪ ಚಿಕ್ಕಮಂಡ್ಯ ಬಳಿ ಸಂಜೆ ನಾಲ್ಕು ಗಂಟೆ ಸಮಯದಲ್ಲಿ ಜರುಗಿದೆ.
ಗಾಯಗೊಂಡ ಶಿಕ್ಷಕಿ ನಗರದ ಸಂತ ಜೋಸೆಫ್ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಸೌಂದರ್ಯ ಎನ್ನಲಾಗಿದ್ದು ಇವರು ಕಾಲೇಜ್ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಚಿಕ್ಕಮಂಡ್ಯದ ಬೀಡಿ ಕಾಲೋನಿ ಬಳಿ ನಿಂತಿದ್ದ ಮಾರುತಿ ಸ್ವಿಫ್ಟ್ ಕಾರು (KA51P5478) ಸ್ಕೂಟಿ ಬರುವುದನ್ನ ಗಮನಿಸುತ್ತಿದ್ದು, ಉದ್ದೇಶ ಪೂರ್ವಕವಾಗಿ ಗುದ್ದಿದ್ದಾರೆ ಎನ್ನಲಾಗಿದೆ. ನಂತರ ಕಾರಿನಲ್ಲಿದ್ದ ಇಬ್ಬರು ಯುವಕರು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದು, ಓಡಿ ಹೋಗುವ ಮುನ್ನ ಸೌಂದರ್ಯಾವರ ಬೈಕ್ ಅನ್ನ ಪಕ್ಕದಲ್ಲಿದ್ದ ಗ್ಯಾರೇಜ್ ಗೆ ತಳ್ಳಿ ಹೋಗಿದ್ದಾರೆ.
ತಕ್ಷಣ ಅಲ್ಲಿದ್ದ ಸಾರ್ವಜನಿಕರು ಆ ಇಬ್ಬರು ಯುವಕರನ್ನ ಹಿಡಿದು ಧರ್ಮದೇಟು ಕೊಟ್ಟು ಅದೇ ಕಾರಿನಲ್ಲಿ ಗಾಯಗೊಂಡಿದ್ದ ಮಹಿಳೆ ಸೌಂದರ್ಯಾರನ್ನ ಆಸ್ಪತ್ರೆಗೆ ಕಳುಹಿಸಿದರು.
PublicNext
20/01/2025 08:21 pm