ಹಾವೇರಿ: ಹಾವೇರಿ ರೋಟರಿ ಕ್ಲಬ್ ಆವರಣದಲ್ಲಿ ಇನ್ನರ್ ವೀಲ್ ಕ್ಲಬ್ ಶನಿವಾರ ಸಂಜೆ ಆಹಾರ ಮೇಳ ಆಯೋಜನೆ ಮಾಡಿತ್ತು. ಹಾವೇರಿ ನಗರದ ಮಹಿಳೆಯರು ತಯಾರಿಸಿದ ಖಾದ್ಯಗಳು, ಕರಕುಶಲ ವಸ್ತುಗಳ ಮಾರಾಟ ಸಹ ಏರ್ಪಡಿಸಿತ್ತು.
ಮೇಳದಲ್ಲಿ ಹಾವೇರಿ ನಗರದ 20ಕ್ಕೂ ಅಧಿಕ ಮಹಿಳೆಯರು ತಾವು ತಯಾರಿಸಿದ ಆಹಾರ ಪದಾರ್ಥಗಳ ಮಾರಾಟ ಮತ್ತು ಪ್ರದರ್ಶನ ನಡೆಸಿದರು. ಅದರಲ್ಲೂ ಉತ್ತರ ಕರ್ನಾಟಕದ ಖರಿಂಡಿ,ಶೇಂಗಾಚಟ್ನಿ,ಮಂಡಕ್ಕಿ ಅವಲಕ್ಕಿ, ಕೊಬ್ಬರಿಕಡ್ಡಿ, ಕೋಡುಬಳೆ ಸೇರಿದಂತೆ ವಿವಿಧ ಖಾದ್ಯಗಳು ಬಾಯಲ್ಲಿ ನೀರೂರಿಸಿದವು.
ರಾಗಿ ಹಲ್ವಾ,ಶಂಕರಪಾಳೆ, ರವಾಉಂಡಿ, ಬೊಂದಿಉಂಡಿ ಚಿಗಳಿ ಸೇರಿದಂತೆ ಉತ್ಪನ್ನಗಳ ಮಾರಾಟದ ಭರಾಟೆ ಸಹ ಜೋರಾಗಿತ್ತು. ಸಂಜೆಯ ಕುರಕಲು ತಿಂಡಿಗಳಾದ ವಡಾಪಾವ್, ಮಿರ್ಚಿಮಂಡಕ್ಕಿ ಇತರ ಖಾದ್ಯಗಳನ್ನು ಆಹಾರಪ್ರಿಯರು ಸವಿದರು.
Kshetra Samachara
19/01/2025 07:25 pm