ಮಂಡ್ಯ: ಡಿಗ್ರಿ ಓದಿದ್ರೂ ಕೆಲಸ ಇಲ್ಲಾ ಅಂತ ಎಷ್ಟೋ ಜನ ಮನೆಯಲ್ಲಿ ಕುಳಿತು ಸರ್ಕಾರಿ ಕೆಲಸ ಸಿಕ್ಕಿದ್ರೆ ಸಾಕು ಅಂತ ಬೇಡುತ್ತಿರೋ ಈ ಕಾಲದಲ್ಲಿ, ಐದನೇ ಕ್ಲಾಸ್ ಫೇಲ್ ಆಗಿರೋ ಈಕೆಗೆ ಸೆಂಟ್ರಲ್ ಗವರ್ಮೆಂಟ್ ಕೆಲಸ ಸಿಕ್ಕಿದೆ. ಆದರೆ, ಅದನ್ನು ಆಕೆ ಮಿಸ್ ಯೂಸ್ ಮಾಡಿಕೊಂಡಿದ್ದಾಳೆ.
ಆಕೆ ಓದಿರೋದು ಕೇವಲ 5ನೇ ಕ್ಲಾಸ್ ಅಷ್ಟೇ. ಆಕೆಯ ಪತಿ ಮಾತ್ರ ಪೋಸ್ಟ್ ಆಫೀಸಿನಲ್ಲಿ ಪೋಸ್ಟ್ ಮಾಸ್ಟರ್. ಆದರೆ, ಆತ ಕೆಲಸದಲ್ಲಿ ದ್ದಾಗಲೇ ತೀರಿಕೊಂಡ. ಐದನೇ ತರಗತಿ ಓದಿದ್ದ ಆಕೆಗೆ ಅನುಕಂಪದ ಆಧಾರದ ಮೇಲೆ ಗಂಡನ ಕೆಲಸ ಸಿಕ್ಕಿತು. ಆದ್ರೆ, ಕಿಂಚಿತ್ತು ಮಾತ್ರ ಓದಿರುವ ಈಕೆಗೆ ಪೋಸ್ಟ್ ಮಾಸ್ಟರ್ ಕೆಲಸ ನಿರ್ವಹಿಸಲು ಸಾಧ್ಯವಾಗಲಿಲ್ಲ. ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಈಕೆ ಮಗ ಪೊಸ್ಟ್ ಮ್ಯಾನ್ ಆಗಿ ಸ್ವಯಂ ಘೋಷಣೆಯೊಂದಿಗೆ ಬಂದ! ಬಂದು ಹಳ್ಳಿ ಜನಕ್ಕೆ ತೀಡಿದ್ದು ಉಂಡೆನಾಮ. ಈ ಘಟನೆ ನಡೆದ್ದಾದ್ರು ಎಲ್ಲಿ? ಏನಿದರ ಕತೆ ಅಂತೀರಾ... ಇಲ್ಲಿದೆ ನೋಡಿ ಡೀಟೈಲ್ಸ್ .
ಈ ಘಟನೆ ನಡಿದಿರೋದು ಕೃಷಿ ಸಚಿವ ಚಲುವರಾಯ ಸ್ವಾಮಿ ತವರೂರು ನಾಗಮಂಗಲ ತಾಲ್ಲೂಕಿನ ಬಿದನಗೆರಯಲ್ಲಿ. ಬಿದನಗೆರ ಪೋಸ್ಟ್ ಮಾಸ್ಟರ್ ಆಗಿದ್ದ ಪುಟ್ಟಸ್ವಾಮಿ ಕೆಲಸದಲ್ಲಿದ್ದಾಗಲೇ ನಿಧನ ಹೊಂದಿದ್ರು. ಅನುಕಂಪದ ಆಧಾರದ ಮೇಲೆ ಹೆಂಡತಿ ಐದನೇ ತರಗತಿ ಫೇಲ್ ಆಗಿರೋ ಸುನಂದ ಅಲಿಯಾಸ್ ಸುಧಾಗೆ ಹಿಂದೆಮುಂದೆ ನೋಡದೆ ಅಂಚೆ ಇಲಾಖೆ ಹಿರಿಯ ಅಧಿಕಾರಿಗಳು ಕೆಲಸ ನೀಡಿ ಬಿದನಗೆರೆಗೆ ಪೋಸ್ಟ್ ಮಾಸ್ಟರ್ ಆಗಿ ನೇಮಕ ಮಾಡಿದ್ರು. ಹೀಗೆ ಬಂದ ಸುನಂದ ಏನೂ ಗೊತ್ತಿಲ್ಲ ಅಂತ ತಲೆ ಮೇಲೆ ಕೈ ಹೊತ್ತು ಕುಳಿತಾಗ ಸಹಾಯ ಮಾಡುವ ನೆಪದಲ್ಲಿಬಂದ ಮಗ ದೊರೆಸ್ವಾಮಿ ಅಲಿಯಾಸ್ ರಾಜು ಡೆಪಾಸಿಟ್ ಇಡಲು ಬಂದವರಿಗೆ ಉಂಡೆ ನಾಮವಿಟ್ಟು ವಿಧವಾ ವೇತನ, ವೃದ್ಧಾಪ್ಯ ವೇತನದ ಹಣ ತನ್ನ ಜೇಬಿಗೇ ಬಿಟ್ಟಿದ್ದಾನೆ!
ಡೆಪಾಸಿಟ್ ಇಟ್ಟ ಹಣಕ್ಕೆ ರಶೀದಿ ಇಲ್ಲ, ಪಾಸ್ ಪುಸ್ತಕ ಇಲ್ಲ, ಏನಿದು!? ಅಂತ ಕೇಳಿದ್ರೆ, ರಾಜು ಸಬೂಬು ಹೇಳಿಕೊಂಡು ಬಂದ. ಅದೇ ಸಮಯಕ್ಕೆ ಹೊಸ ಪೋಸ್ಟ್ ಮ್ಯಾನ್ ಒಬ್ಬರು ಇಲ್ಲಿ ವರ್ಗಾವಣೆಗೊಂಡು ಬಂದಾಗ ಎಲ್ಲಾ ಬಟಾಬಯಲಾಗಿ ಬರೋಬ್ಬರಿ ಎಂಟರಿಂದ ಹತ್ತು ಲಕ್ಷ ಹಣ ದುರುಪಯೋಗವಾಗಿರೋದು ಮೇಲ್ನೋಟಕ್ಕೆ ತಿಳಿದು ಬಂದಿದೆ! ಇನ್ನೆಷ್ಟು ಅನ್ನೋದು ತನಿಖೆಯಿಂದ ಸರಿಯಾಗಿ ತಿಳಿದು ಬರಬೇಕಿದೆ. ಮೇಲಾಧಿಕಾರಿಗಳೂ ಶಾಮೀಲಾಗಿ ಈ ಕೃತ್ಯ ನಡೆಸಿದ್ದಾರಾ? ಅನ್ನೋ ಅನುಮಾನವೂ ವ್ಯಕ್ತವಾಗಿದೆ.
PublicNext
19/01/2025 06:44 pm