ತುಮಕೂರು : ಬೆಳ್ಳಂಬೆಳಗ್ಗೆ ಚುಮು ಚುಮು ಚಳಿಯ ನಡುವೆ ಜಿಟಿ ಜಿಟಿ ಮಳೆ ಆರಂಭ ಆಗಿದೆ. ತುಮಕೂರಿನಲ್ಲಿ ಮುಂಜಾನೆ ಮಳೆರಾಯಾನ ಆಗಮನವಾಗಿದೆ. ಬೆಳಗ್ಗೆಯಿಂದಲೂ ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಜನರಿಗೆ ಕಿರಿ ಕಿರಿ ಉಂಟು ಮಾಡಿದೆ.
ಜಿಟಿ ಜಿಟಿ ಮಳೆಗೆ ವಾಹನ ಸವಾರರು ಹೈರಾಣಗಿದ್ದು ಬೆಚ್ಚನೆಯ ಉಡುಪುಗಳ ಮೊರೆ ಹೋಗಿದ್ದಾರೆ. ತಿಂಗಳುಗಳ ನಂತರ ತುಮಕೂರು, ಕೊರಟಗೆರೆ, ಗುಬ್ಬಿ ತಾಲೂಕೂಗಳ ಹಲವೆಡೆ ಮಳೆಯ ಸಿಂಚನವಾಗಿದೆ.
PublicNext
19/01/2025 12:30 pm