ಮೈಸೂರು : ಇ.ಡಿ.ಮುಡಾ ಆಸ್ತಿಯನ್ನ ಜಪ್ತಿ ಮಾಡಿದ ವಿಚಾರವಾಗಿ ಮೈಸೂರಿನಲ್ಲಿ ಸಂಸದ ಯದುವೀರ್ ಪ್ರತಿಕ್ರಿಯೆ ನೀಡಿದ್ದಾರೆ. ಮುಡಾದಲ್ಲಿ ತಪ್ಪುಗಳು ಆಗಿದೆ ಎಂಬುದು ಇಡಿಯ ವರದಿಯಲ್ಲಿ ಗೊತ್ತಾಗಿದೆ. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದಿದ್ದಾರೆ.
ಆರೋಪ ಬಂದ ದಿನವೇ ನಾವು ಸಿಎಂ ರಾಜೀನಾಮೆ ಕೇಳಿದ್ದೆವು. ಸಿಎಂ ತನಿಖೆಯಾಗಲಿ ಎಂದು ಹೇಳುತ್ತಿದ್ದರು. ಈಗ ಇಡಿಯೇ ತನಿಖೆ ಮಾಡಿ ಅಕ್ರಮ ಆಗಿದೆ ಎಂದು ವರದಿ ಬಿಡುಗಡೆ ಮಾಡಿದೆ. ಈಗಲಾದರೂ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು. ನಿಷ್ಪಕ್ಷಪಾತ ತನಿಖೆಗೆ ಸಿಎಂ ಅನುಕೂಲ ಮಾಡಿಕೊಡಲಿ. ಸಂಪೂರ್ಣ ತನಿಖೆ ಮುಗಿದ ಮೇಲೆ ತಪ್ಪಿತಸ್ಥರಲ್ಲ ಎಂದು ಸಾಬೀತಾದ್ರೆ ಮತ್ತೆ ಅಧಿಕಾರ ಪಡೆದುಕೊಳ್ಳಲಿ ಎಂದಿದ್ದಾರೆ.
PublicNext
18/01/2025 07:30 pm