ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಗೋವುಗಳ ಮೇಲೆ‌ ನಡೆದ ಪೈಶಾಚಿಕ ಕೃತ್ಯ ಖಂಡಿಸಿ ಪ್ರತಿಭಟನೆ

ದಾವಣಗೆರೆ : ಬೆಂಗಳೂರಿನಲ್ಲಿ ಗೋವುಗಳ ಮೇಲೆ‌ ನಡೆದ ಪೈಶಾಚಿಕ ಕೃತ್ಯ ಹಿನ್ನೆಲೆ ದಾವಣಗೆರೆಯಲ್ಲಿ ಗೋ ಸಂರಕ್ಷಣಾ ಸಂವರ್ದನಾ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಜಯದೇವ ಸರ್ಕಲ್‌ ನಲ್ಲಿ ಪ್ರತಿಭಟನೆ ನಡೆಸಿದ ಹಿಂದೂ ಕಾರ್ಯಕರ್ತರು, ಗೋವುಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿ,ಕಾಂಗ್ರೇಸ್ ಪಕ್ಷದ ವಿರುದ್ದ ಧಿಕ್ಕಾರ ಕೂಗಿದ ಹಿಂದೂ ಕಾರ್ಯಕರ್ತರು.

ಗೋಮಾತೆಯ ಕೆಚ್ಚಲಿಗೆ ಕೊಯ್ದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ.ಈ ಕೃತ್ಯ ನಡೆದರು ಬೇರೆ ಹಸುಗಳನ್ನು ಕೊಡಿಸುತ್ತೇನೆ ಎಂದು ಸಚಿವ ಜಮೀರ್ ಹೇಳುತ್ತಾನೆ,ನಿಮ್ಮ ತಾಯಿ, ಮಡದಿ, ಅಕ್ಕ ತಂಗಿ ಗೆ ಈ ರೀತಿ ಮಾಡಿ ಬೇರೆಯವರನ್ನು ತಂದು ಕೊಡುತ್ತೇವೆ ಎಂದರೆ ಸುಮ್ಮನೆ ಇರುತ್ತಿದ್ದಿರಾ,ಜಮೀರ್ ವಿರುದ್ಧ ಪ್ರತಿಭಟನೆಯಲ್ಲಿ ಇದೆ ಮೂರು ಹಸುಗಳನ್ನು ತಂದು ಗೋ ಪೂಜೆ ಮಾಡಿದ್ದರು.

ಆ ಗೋವುಗಳನ್ನೇ ಟಾರ್ಗೆಟ್ ಮಾಡಿ ಕೆಚ್ಚಲಿಗೆ ಚಾಕು ಹಾಕಿದ್ದಾರೆ. ಹಿಂದೂ ದೇವರುಗಳ ಕೈಯಲ್ಲಿರುವ ಅಸ್ತ್ರಗಳು ನಮ್ಮ ಕೈಗೆ ಬರುವಂತೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.

ಜಮೀರ್ ಹಾಗೂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ಹಿಂದೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿ ಪ್ರತಿಭಟನೆ ಮಾಡಿದರು.

Edited By : Vinayak Patil
PublicNext

PublicNext

18/01/2025 06:49 pm

Cinque Terre

27.92 K

Cinque Terre

0