ಮಂಡ್ಯ: ವಿಶ್ವ ವಿಖ್ಯಾತ ಧಾರ್ಮಿಕ ಕ್ಷೇತ್ರ ಮೇಲು ಕೋಟೆಯಲ್ಲಿ ಆಡಳಿತ ವ್ಯವಸ್ಥೆ ಹೇಗಿದೆ ಅಂದ್ರೆ ಭಕ್ತಾದಿಗಳು ಮುಂದೊಂದು ದಿನ ಬೇಸರ ಗೊಂಡು ಈ ಪುಣ್ಯ ಕ್ಷೇತ್ರಕ್ಕೆ ಬರುವುದನ್ನೇ ನಿಲ್ಲಿಸಿದ್ರೂ ಅಚ್ಚರಿಯಿಲ್ಲ ಎಂಬಂತಾಗಿದೆ!
ಸಾವಿರಾರು ವರ್ಷಗಳ ಹಿಂದೆ ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ಬಹಳ ಅದ್ಧೂರಿಯಾಗಿ ಪ್ರತಿವರ್ಷ ನಡೆಯುತ್ತಿದ್ದ ರಾಜಮುಡಿ, ಕೃಷ್ಣರಾಜಮುಡಿ, ಅಂಗಮಣಿ ಉತ್ಸವಗಳು ಇದೀಗ ಬೇಕಾಬಿಟ್ಟಿಯಾಗಿ ನಡೆಯುತ್ತಿವೆ.
ಬುಧವಾರ ರಾತ್ರಿ ನಡೆದ ಅಂಗಮಣಿ ಉತ್ಸವಕ್ಕೆ ಕನಿಷ್ಠ ರಾಜಗೋಪುರ ಹಾಗೂ ದೇವಾಲಯ ಮುಂಭಾಗ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸದ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.
ದೇಶಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿರುವ ಚೆಲುವ ನಾರಾಯಣಸ್ವಾಮಿ ಬಗ್ಗೆ ದೇವಾಲಯದ ಆಡಳಿತ ಮಂಡಳಿಯ ಅಸಡ್ಡೆ ಎದ್ದು ಕಾಣುತ್ತಿದೆ.
Kshetra Samachara
17/01/2025 06:07 pm