ಕಲಬುರಗಿ: ಅಫಜಲಪುರ ತಾಲ್ಲೂಕಿನ ಉಡಚಣ ಗ್ರಾಮದ ಶಂಕರಲಿಂಗೇಶ್ವರ ಸಂಸ್ಥಾನ ಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಕಂಠಪೂರ್ತಿ ಮದ್ಯ ಕುಡಿದು ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ನಡೆದಿದೆ.
ಮದ್ಯ ಸೇವನೆ ಮಾಡಿ, ಅರ್ಧಂಬರ್ಧ ಬಟ್ಟೆ ಧರಿಸಿ, ಅನುಚಿತವಾಗಿ ವರ್ತಿಸಿದ ಸ್ವಾಮೀಜಿಯ ವಿಡಿಯೋವನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ.
ಉಡಚಣ ಗ್ರಾಮಕ್ಕೆ ಮರಳಿ ಬಂದ ಸ್ವಾಮೀಜಿಯು, ಗ್ರಾಮಸ್ಥರಲ್ಲಿ ನನ್ನಿಂದ ತಪ್ಪಾಗಿದೆ ಎಂದು ಕ್ಷಮಾಪಣೆ ಕೇಳಲಾಗಿದೆ. ಇದರಿಂದ ನೊಂದ ಭಕ್ತರು ಸ್ವಾಮೀಜಿಯನ್ನು ಮಠಕ್ಕೆ ಸೇರಿಸಿಕೊಳ್ಳದೆ ಮಠದಿಂದ ಹೊರಹಾಕಿ, ಬೇರೆ ಮಠಾಧಿಪತಿಗೆ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.
PublicNext
17/01/2025 06:05 pm