ಮಂಡ್ಯ: ಮಾಜಿ ಸಚಿವರಿಗೆ ಇನ್ನೂ ಸೋಲಿನ ಹತಾಶೆ ಕಾಡುತ್ತಿರುವ ಹಾಗೇ ಕಾಣಿಸುತ್ತಿದೆ. ಚುನಾವಣೆ ನಡೆದು ಎರಡು ವರ್ಷ ಕಳೆದರೂ ಸೋಲಿನ ನೋವಿನಿಂದ ಹೊರಬಾರದ ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ಭಾಷಣದಲ್ಲಿ ತನ್ನ ನೋವನ್ನ ವ್ಯಕ್ತ ಪಡಿಸಿದ್ದಾರೆ.
ಮಂಡ್ಯದ ಕೆ.ಆರ್ ಪೇಟೆಯಲ್ಲಿ ಸೋಲಿನ ನೋವಿನ ಹತಾಶೆ ನುಡಿದಿದ್ದು ಕಳೆದ ವಿಧಾನಸಭಾ ಸೋಲು ನೆನೆದು ಹತಾಶೆಯ ಹೇಳಿಕೆ ಕೊಟ್ಟಿದ್ದಾರೆ..ಚುನಾವಣೆಲೀ ನನಗೆ ನನ್ನ ಸೋಲು ಬೇಜಾರಿಲ್ಲ.ಆದರೆ, ನನ್ನ ಅಧಿಕಾರದ ಅವಧಿಯಲ್ಲಿ K.R ಪೇಟೆ ತಾಲ್ಲೂಕು ಅಭಿವೃದ್ಧಿಗೆ 1,800 ಕೋಟಿ ಅನುದಾನ ತಂದೆ. ಆದರೂ ತಾಲೂಕಿನ ಜನ ನನ್ನ ಕೈ ಹಿಡಿಯದೆ ಮೂರನೇ ಸ್ಥಾನಕ್ಕೆ ತಳ್ಳಿದ್ರು.ಅದು ನನಗೆ ತುಂಬಾ ನೋವಾಗಿದೆ ಎಂದು ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ಹತಾಶೆ ವ್ಯಕ್ತ ಪಡಿಸಿದ್ದಾರೆ.
PublicNext
17/01/2025 03:42 pm