ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಕೊಲೆಗಡುಕ ಸರ್ಕಾರ : ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ

ದಾವಣಗೆರೆ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಕೊಲೆಗಡುಕ ಸರ್ಕಾರ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ತಾಯಿ ಎದೆ ಹಾಲಿನ ನಂತರ ಗೋವಿನ ಹಾಲನ್ನು ಕುಡಿಯುತ್ತೇವೆ. ಅಂತಹ ಗೋವುಗಳಿಗೆ ಈ ಸರ್ಕಾರ ನೋವುಂಟು ಮಾಡಿದೆ. ಈ ಸರ್ಕಾರಕ್ಕೆ ಗೋವಿನ ಶಾಪ ತಟ್ಟಿ ಸರ್ಕಾರ ಪತನವಾಗುತ್ತದೆ. ಗೋವು ನರಳಾಡುವಂತೆ ಮಾಡಲು ಸಿದ್ದರಾಮಯ್ಯ ಜಮೀರ್ ನೇರಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಮೇಶ್ ಜಾರಕಿಹೊಳಿ ಯಾರು ಎನ್ನುವುದು ನಮಗೆ ಗೊತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಲು ಅವರೊಬ್ಬರೇ ಕಾರಣ ಅಲ್ಲ. ಕಾಂಗ್ರೆಸ್ ‌ತೊರೆದು 17 ಜನ ಶಾಸಕರು ಬಿಜೆಪಿ ಬಂದಿದ್ದು ಯಡಿಯೂರಪ್ಪ ಸಿಎಂ ಮಾಡಲು. ಯಡಿಯೂರಪ್ಪನವರನ್ನು ಕೆಳಗೆ ಇಳಿಸಿದ್ದಕ್ಕೆ 2013ರಲ್ಲಿ 66 ಸೀಟ್ ಬಂತು. ರಮೇಶ್ ಜಾರಕಿಹೊಳಿ ನನಗೆ ಅತ್ಮೀಯ ಸ್ನೇಹಿತ ನಾನು ಅವರು ಚೆನ್ನಾಗಿಯೇ ಇದ್ದೇವೆ. ರಮೇಶ್ ಜಾರಕಿಹೊಳಿ ಹಿಂದೆ ಇರುವವರು ಗುಂಡು ಹಾರಿಸುತ್ತಿದ್ದಾರೆ ಎಂದರು.

ರಮೇಶ್ ಜಾರಕಿಹೊಳಿ ರಾಜಕೀಯದಲ್ಲಿ ಕಣ್ಣು ಬಿಡುವುದಿಕ್ಕಿಂತ ಮುಂಚೆ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಿದ್ದಾರೆ. ಇಂತಹ ನಾಯಕರ ಬಗ್ಗೆ ಹಗುರವಾಗಿ ಮಾತ‌ನಾಡಿದರೆ ಸರಿ ಇರೋದಿಲ್ಲ. ಇದೇ ಮುಂದುವರೆದರೆ ನಾವೆಲ್ಲ ಕಾರ್ಯಕರ್ತರು ರಾಜ್ಯದ ಜನರು ಸುಮ್ಮನಿರೋದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಯಡಿಯೂರಪ್ಪನವರು ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಅವರು ಎಲ್ಲಿ ಕೂಡ ವಿಜಯೇಂದ್ರ ಸಿಎಂ ಮಾಡುತ್ತೇನೆ ಎಂದು ಹೇಳಿಲ್ಲ. ನಾವು ಹೇಳುತ್ತಿದ್ದೇವೆ ವಿಜಯೇಂದ್ರರನ್ನು ಮುಂದಿನ ಸಿಎಂ ಅಗುತ್ತಾರೆ ಅದನ್ನು ತಪ್ಪಿಸಲು ಯಾವ ದುಷ್ಟಗ್ರಹದಿಂದ ಸಾಧ್ಯವಾಗುವುದಿಲ್ಲ ಎಂದರು.

ಎಂ.ಪಿ ರೇಣುಕಾಚಾರ್ಯ, ಮಾಜಿ ಸಚಿವ

Edited By : Suman K
PublicNext

PublicNext

17/01/2025 03:39 pm

Cinque Terre

17.8 K

Cinque Terre

0