ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಐಕ್ಯಮಂಟಪದ ಅಭಿವೃದ್ಧಿಗಾಗಿ ಹೊಸ ಸ್ವಾಮೀಜಿ

ಹಾವೇರಿ ತಾಲೂಕು ನರಸೀಪುರದಲ್ಲಿ ನಿಜಶರಣ ಅಂಬಿಗ ಚೌಡಯ್ಯಪೀಠದಲ್ಲಿ ಶರಣ ಸಂಸ್ಕೃತಿ ಉತ್ಸವ ನಡೆಯುತ್ತಿದೆ. ಇದರ ಮಧ್ಯದಲ್ಲಿಯೇ ಅಂಬಿಗರ ಚೌಡಯ್ಯನಪೀಠದ ಅಭಿವೃದ್ದಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಅಂಬಿಗರ ಚೌಡಯ್ಯಪೀಠಕ್ಕೆ ಪರ್ಯಾಯವಾಗಿ ಚೌಡಯ್ಯ ಐಕ್ಯಮಂಟಪದಲ್ಲಿ ಮತ್ತೊಬ್ಬ ಸ್ವಾಮೀಜಿ ಪಟ್ಟಾಭಿಷೇಕ ಮಾಡಿಸಿಕೊಂಡಿದ್ದಾರೆ. ವೀರಭದ್ರ ಹೆಸರಿನ ಇವರು ಅಭಿನವ ಅಂಬಿಗ ಚೌಡಯ್ಯ ಸ್ವಾಮೀಜಿ ಹೆಸರಿನಲ್ಲಿ ಐಕ್ಯಮಂಟಪದ ಸ್ವಾಮೀಜಿಯಾಗಿದ್ದಾರೆ.

ಈ ಮಧ್ಯೆ ಐಕ್ಯಮಂಟಪ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಸ್ಥಾಪಿಸಲ್ಪಟ್ಟ ಮುಕ್ತೇಶ್ವರ ದೇವಸ್ಥಾನದ ಪಕ್ಕದಲ್ಲಿಯೇ ಇದೆ. ಇದು ಪುರಾತತ್ವ ಇಲಾಖೆಯ ಸುಪರ್ದಿಗೆ ಒಳಪಡುವ ಕಾರಣ ಐಕ್ಯಮಂಟಪ ಅಭಿವೃದ್ಧಿ ಆಗಿಲ್ಲ ಎಂದು ಚೌಡಯ್ಯಪೀಠದ ಕಾರ್ಯಾಧ್ಯಕ್ಷ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ. ಇನ್ನು ಹೊಸ ಸ್ವಾಮೀಜಿಗೂ ತಮಗೂ ಸಂಬಂಧವಿಲ್ಲ. ಐಕ್ಯಮಂಟಪ ಅಭಿವೃದ್ಧಿ ಆಗದಿರುವದು ತಮಗೂ ನೋವು ತಂದಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯಪೀಠದ ಶಾಂತಭೀಷ್ಮಶ್ರೀಗಳು ತಿಳಿಸಿದರು.

Edited By : Somashekar
Kshetra Samachara

Kshetra Samachara

16/01/2025 06:00 pm

Cinque Terre

29.68 K

Cinque Terre

0

ಸಂಬಂಧಿತ ಸುದ್ದಿ