ಮೈಸೂರು: ಮಕರ ಸಂಕ್ರಾಂತಿಯಿಂದ ನಟ ದರ್ಶನ್ ಟೆಂಪಲ್ ರನ್ ಶುರು ಮಾಡಿದ್ದಾರೆ. ನಿನ್ನೆಯಷ್ಟೇ ಆರತಿ ಉಕ್ಕಡದ ಶ್ರೀ ಮಾರಮ್ಮನ ದೇಗುಲಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದ ನಟ ದರ್ಶನ್, ಇಂದು ನಾಡದೇವಿ ದರ್ಶನ ಮಾಡಿದ್ದಾರೆ.
ಹೌದು, ಇಂದು ಕೂಡ ಪತ್ನಿ ವಿಜಯಲಕ್ಷ್ಮಿ ಸಮೇತವಾಗಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ತಾಯಿ ಶ್ರೀ ಚಾಮುಂಡೇಶ್ವರಿ ಅಮ್ಮನ ದರ್ಶನ ಪಡೆದಿದ್ದಾರೆ. ನಾಡದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದರ್ಶನ್ ನೋಡಲು ಸಾಕಷ್ಟು ಅಭಿಮಾನಿಗಳು ನೆರೆದಿದ್ದು ಡಿ ಬಾಸ್ ಪರ ಘೋಷಣೆ ಕೂಗಿದ್ದಾರೆ.
PublicNext
16/01/2025 04:49 pm