ಧನರಾಜ್ ಅವರು ಟಾಸ್ಕ್ ನ ಮೋಸದಿಂದ ಗೆದ್ರು ಅನ್ನೋ ಆರೋಪ ಇದೆ. ಕನ್ನಡಿಯಲ್ಲಿ ನೋಡಿ ಆಡಿದ್ದರಿಂದ ಆಟ ಅವರಿಗೆ ಸುಲಭ ಆಯಿತು. ಹೀಗಾಗಿ, ಗೆಲುವು ಅವರದ್ದಾಯಿತು. ಆದರೆ, ಈ ಆಟವನ್ನು ಬಿಗ್ ಬಾಸ್ ರದ್ದು ಮಾಡಿರಲಿಲ್ಲ. ಧನರಾಜ್ ಮಿಡ್ ವೀಕ್ ಎಲಿಮಿನೇಷ್ ನಿಂದ ಬಚಾವ್ ಆಗಲು ಈ ಗೆಲುವು ಸಾಕಷ್ಟು ಪ್ರಾಮುಖ್ಯತೆ ವಹಿಸಿತ್ತು.
ಆದರೆ, ಈಗ ಈ ಗೆಲುವು ಅವರಿಗೆ ಮುಳುವಾಯಿತಾ..? ನಿನ್ನೆಯ ಎಪಿಸೋಡ್ ನಲ್ಲಿ ಯಾವುದೇ ಎಲಿಮಿನೇಷನ್ ನಡೆಸಿರಲಿಲ್ಲ. ಇದಕ್ಕೆ ಕಾರಣ ಆಗಿದ್ದು ಧನರಾಜ್ ಮೋಸದಾಟ ಎಂದು ಬಿಗ್ ಬಾಸ್ ಹೇಳಿದ್ದಾರೆ. ನನ್ನನ್ನೂ ಕೂಡ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳುವಂತೆ ಧನರಾಜ್ ಬಿಗ್ ಬಾಸ್ ಅಲ್ಲಿ ಕೇಳಿಕೊಂಡಿದ್ದಾರೆ. ಅವರಿಗೆ ಎಲಿಮಿನೇಷನ್ ಶಿಕ್ಷೆ ಆಗುತ್ತಾ ಎನ್ನುವ ಪ್ರಶ್ನೆ ಮೂಡಿದೆ.
PublicNext
16/01/2025 03:14 pm