ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಕಲೇಶಪುರ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಕ್ಯಾಂಟೀನ್‌ಗೆ ನುಗ್ಗಿದ ಲಾರಿ - ಇಬ್ಬರ ಸಾವು

ಸಕಲೇಶಪುರ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕ್ಯಾಂಟಿನ್‌ಗೆ ಲಾರಿ ನುಗ್ಗಿದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರ ತಾಲ್ಲೂಕಿನ ಗುಳಗಳಲೆ ಸಮೀಪ ನಡೆದಿದೆ.

ಮೃತರನ್ನು ಗಾರೆ ಕೆಲಸಕ್ಕಾಗಿ ಬಂದಿದ್ದ ಚಿತ್ರದುರ್ಗ ಮೂಲದ ವೀರೇಶ್ ಹಾಗೂ ಲಾರಿಯ ಸಿಬ್ಬಂದಿ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಸಕಲೇಶಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಕ್ಯಾಂಟಿನ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಲಾರಿಯಡಿ ಕ್ಯಾಂಟಿನ್ ಮುಂದೆ ನಿಲ್ಲಿಸಿದ್ದ ಬೈಕ್‌ಗಳು ಸಿಲುಕಿವೆ. ಲಾರಿ ಮೊದಲು ಕ್ಯಾಂಟಿನ್‌ಗೆ ಡಿಕ್ಕಿ ಹೊಡೆದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಕ್ಯಾಂಟಿನ್ ಅಕ್ಕಪಕ್ಕ ಹಾಗೂ ಹಿಂಬದಿಯಿದ್ದ ವಾಸದ ಮನೆಗಳಿದ್ದು ಅದೃಷ್ಟವಶಾತ್ ಡಿಕ್ಕಿ ಹೊಡೆದು ಲಾರಿ ಪಲ್ಟಿಯಾಗಿದ್ದರಿಂದ ಮನೆಗಳು ಬಚಾವ್ ಆಗಿವೆ.

Edited By : Vijay Kumar
PublicNext

PublicNext

14/01/2025 02:17 pm

Cinque Terre

22.41 K

Cinque Terre

0

ಸಂಬಂಧಿತ ಸುದ್ದಿ