ಸಕಲೇಶಪುರ: ಚಲಿಸುತ್ತಿದ್ದ ಸಾರಿಗೆ ಬಸ್‌ನ ಹಿಂಬದಿ ಚಕ್ರಗಳು ಕಳಚಿ ಬಿದ್ದಿದ್ದು ಅದೃಷ್ಟವಷಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಬ್ಯಾದನೆ ಗ್ರಾಮದ ಬಳಿ ನಡೆದಿದೆ.
ಚಿಕ್ಕಮಗಳೂರು ಘಟಕಕ್ಕೆ ಸೇರಿದ ಇಚಿ 18 ಈ 0548 ನಂಬರ್‌ನ ಸಾರಿಗೆ ಬಸ್ ಸಕಲೇಶಪುರದಿಂದ ಬೇಲೂರಿಗೆ ತೆರಳುತ್ತಿದ್ದ ಬಸ್ ಬ್ಯಾದನೆ ಗ್ರಾಮದಬಳಿ ತೆರಳುತ್ತಿದ್ದಾಗ ಹಿಂಬದಿ ಚಕ್ರ ಕಳಚಿದ್ದು ಚಾಲಕನ ನಿಯಂತ್ರಣ ತಪ್ಪಿದೆ. ತಕ್ಷಣ ಎಚ್ಚೆತ್ತ ಚಾಲಕ ಕೂಡಲೇ ಬಸ್ ನಿಲ್ಲಿಸಿದ್ದಾರೆ.
ಬಸ್‌ನಲ್ಲಿ ಸುಮಾರು 40 ಕ್ಕೂ ಹೆಚ್ಚು ಪ್ರಯಾಣಿಕರಿದ್ದು ಚಾಲಕನ ಸಮಯಪ್ರಜ್ಞೆಯಿಂದ ಅಪಾಯದಿಂದ ಪಾರಾಗಿದ್ದಾರೆ. ಪ್ರಯಾಣಿಕರನ್ನು ಬೇರೆ ಸಾರಿಗೆ ವಾಹನದಲ್ಲಿ ತೆರಳಲು ಅವಕಾಶ ಕಲ್ಪಿಸಲಾಯಿತು.
PublicNext
14/01/2025 12:52 pm