ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಂಪಿಯನ್ಸ್ ಟ್ರೋಫಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ - ಟೆಂಬಾ ಬವುಮಾಗೆ ನಾಯಕ ಪಟ್ಟ

ಪಾಕಿಸ್ತಾನ ಮತ್ತು ಯುಎಇಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ 2025 ಗಾಗಿ ದಕ್ಷಿಣ ಆಫ್ರಿಕಾ ಸೋಮವಾರ ತನ್ನ 15 ಜನರ ತಂಡವನ್ನು ಪ್ರಕಟಿಸಿದೆ.

ವೇಗದ ಬೌಲರ್‌ಗಳಾದ ಅನ್ರಿಚ್ ನಾರ್ಟ್ಜೆ ಮತ್ತು ಲುಂಗಿ ಎನ್‌ಗಿಡಿ ಅವರನ್ನು ತಂಡದಲ್ಲಿ ಹೆಸರಿಸಲಾಗಿದೆ. ದಕ್ಷಿಣ ಆಫ್ರಿಕಾ ತಂಡವನ್ನು ಟೆಂಬಾ ಬವುಮಾ ಮುನ್ನಡೆಸಲಿದ್ದಾರೆ. ದಕ್ಷಿಣ ಆಫ್ರಿಕಾ ತನ್ನ 2023ರ ಏಕದಿನ ವಿಶ್ವಕಪ್ ತಂಡದಿಂದ ಚಾಂಪಿಯನ್ಸ್ ಟ್ರೋಫಿಗಾಗಿ 15 ಆಟಗಾರರಲ್ಲಿ 10 ಜನರನ್ನು ಉಳಿಸಿಕೊಂಡಿದೆ.

ತಂಡ ಹೀಗಿದೆ:

ತೆಂಬಾ ಬವುಮಾ (ನಾಯಕ), ಟೋನಿ ಡಿ ಝೋರ್ಜಿ, ಮಾರ್ಕೊ ಯಾನ್ಸೆನ್, ಹೆನ್ರಿಚ್‌ ಕ್ಲಾಸೆನ್ (ವಿಕೆಟ್‌ ಕೀಪರ್‌), ಕೇಶವ್ ಮಹಾರಾಜ್, ಏಡನ್ ಮರ್ಕರಂ, ಡೇವಿಡ್‌ ಮಿಲ್ಲರ್‌, ವಿಯಾನ್ ಮುಲ್ಡರ್‌, ಲುಂಗಿ ಗಿಡಿ, ಆ್ಯನ್ರಿಚ್‌ ನಾಕಿಯಾ, ಕಗಿಸೊ ರಬಾಡ, ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್), ತಬ್ರೇಜ್ ಸಂಶಿ, ಟ್ರಿಸ್ಟನ್ ಸ್ಟಬ್ಸ್‌, ರಸೀ ವಾನ್‌ಡರ್‌ ಡಸೆನ್.

Edited By : Vijay Kumar
PublicNext

PublicNext

14/01/2025 08:25 am

Cinque Terre

18.09 K

Cinque Terre

0

ಸಂಬಂಧಿತ ಸುದ್ದಿ