ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರ: ಜಿಂಕೆ, ಕಾಡುಹಂದಿ ಬೇಟೆ - ಮೂವರ ಬಂಧನ

ರಾಮನಗರ: ಪಾರ್ಟಿಗಳಿಗೆ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಅದರ ಮಾಂಸ ಸಾಗಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಸಂಚಾರ ಜಾಗೃತದಳದ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಬಿಡದಿ ಸಮೀಪದ ಚಿಕ್ಕ ಕುಂಟನಹಳ್ಳಿ ಕ್ರಾಸ್ ಬಳಿ ಬೆಂಗಳೂರಿನ ನಾಗಸಂದ್ರ ಸಮೀಪದ ತೋಟದ ಗುಡ್ಡನಹಳ್ಳಿ ವಾಸಿ ಶ್ರೀನಿವಾಸ್(47), ನೆಲಮಂಗಲ ತಾಲೂಕು ಪಾದನಕುಂಟೆ ಗ್ರಾಮದ ಹನುಮಂತರಾಜು (44), ರಾಮನಗರ ತಾಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ಮುನಿರಾಜು (38) ಬಂಧಿತರು. ಮೂವರು ಆರೋಪಿಗಳು ಎರಡು ಜಿಂಕೆ ಮತ್ತು ಎರಡು ಕಾಡುಹಂದಿಯನ್ನು ಕೊಂದು ಮಹೀಂದ್ರಾ ಥಾರ್ ವಾಹನದಲ್ಲಿ ಸಾಗಿಸುತ್ತಿದ್ದಾಗ ಬೆಂಗಳೂರು ಅರಣ್ಯ ಸಂಚಾರ ದಳದ ಆರ್‌ಎಫ್‌ಒ ರಮೇಶ್ ಶೇತಸನದಿ ಮತ್ತು ಸಿಬ್ಬಂದಿ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

ಅರಣ್ಯಾಧಿಕಾರಿಗಳನ್ನು ಕಂಡು ಥಾರ್ ಜೀಪ್​​ನಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಚೇಸಿಂಗ್ ಮಾಡಿ ರಾಮನಗರ ಜಿಲ್ಲೆಯ ಚಿಕ್ಕಕುಂಟನಹಳ್ಳಿ ಕ್ರಾಸ್ ಬಳಿ ಬಂಧಿಸಲಾಗಿದೆ. ಹೈಫ್ಲ್ಯಾಶ್ ಲೈಟ್‍ಗಳನ್ನ ಬಳಸಿ ಆರೋಪಿಗಳು ಬೇಟೆಯಾಡುತ್ತಿದ್ದರು. ಎರಡು ತಿಂಗಳ ಸತತ ಪ್ರಯತ್ನದಿಂದ ಆರೋಪಿಗಳು ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು ಅರಣ್ಯ ಸಂಚಾರ ದಳದ ಡಿಸಿಎಫ್ ಸುನಿತಾ ಬಾಯಿ, ಎಸಿಎಫ್ ಸರಿತಾ ಮಾರ್ಗದರ್ಶನದಲ್ಲಿ, ಆರ್​ಎಫ್ಒ ರಮೇಶ್, ಸಿದ್ದರಾಜು, ಅಮೃತ್ ದೇಸಾಯಿ, ರಾಜು, ಆಶಾ, ಚೇಸಿಂಗ್ ಮಾಡಿದ ಚಾಲಕ ಸುರೇಶ್​ ನೇತೃತ್ವದ ತಂಡದ ವಿಶೇಷ ಕಾರ್ಯಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

Edited By : Nagaraj Tulugeri
PublicNext

PublicNext

11/01/2025 07:57 pm

Cinque Terre

23.87 K

Cinque Terre

0