ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವದೆಹಲಿ : ರಾಜ್ಯದಲ್ಲಿ ಚಂಬಲ್ ಕಣಿವೆ ಗೂಂಡಾಗಳ ರೀತಿ ಆಡಳಿತ ನಡೆಯುತ್ತಿದ್ಯಾ? - ಸಂಸದ ಗೋವಿಂದ ಕಾರಜೋಳ ಪ್ರಶ್ನೆ

ನವದೆಹಲಿ : ಸಿ.ಟಿ.ರವಿ ಬಂಧಿಸಿರುವ ಘಟನೆಯನ್ನ ಸಂಸದ ಗೋವಿಂದ ಕಾರಜೋಳ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು ಯಾರೇ ಇರಲಿ ಯಾವುದೇ ಪಕ್ಷದವರು ಆಗಿರಲಿ 140 ಕೋಟಿ ಜನರಿಗೆ ಮಾದರಿಯಾಗಿರಬೇಕು. ಅಕಸ್ಮಾತ್ ರವಿ ಅವರು ಆ ಪದ ಬಳಕೆ ಮಾಡಿದ್ರೆ ತನಿಖೆ ಆಗಬೇಕು.

ಆದ್ರೆ ಸಿ.ಟಿ. ರವಿಯವರನ್ನು ಸರ್ಕಾರ ನಡೆಸಿಕೊಂಡಿರುವ ರೀತಿ ಖಂಡನೀಯ. ಪರಿಷತ್ ನಲ್ಲಿ ನಡೆದಿದ್ದರಿಂದ ಈ ಘಟನೆ ಕುರಿತು ಸಭಾಪತಿಗಳೇ ಕರೆದು ವಿಚಾರಣೆ ನಡೆಸಬಹುದಿತ್ತು. ಈ ಪ್ರಕರಣದಲ್ಲಿ ಸಿ.ಟಿ. ರವಿಯವರನ್ನ ತರಾತುರಿಯಲ್ಲಿ ಬಂಧಿಸಿ, ದೇಶದ್ರೋಹಿ ರೀತಿ ಬೇರೆ ಬೇರೆ ಕಡೆ ಸುತ್ತಾಡಿಸಿದ್ದು ಸರಿ ಅಲ್ಲ. ಅಲ್ದೇ ಸಿ.ಟಿ. ರವಿ ಅವರ ಜೊತೆ ವಕೀಲರು ಮಾತನಾಡಲು ಅವಕಾಶ ಕೊಟ್ಟಿಲ್ಲ. ರಾಜ್ಯದಲ್ಲಿ ಸಂವಿಧಾನಾತ್ಮಕ ಆಡಳಿತ ನಡೆಯುತ್ತಿದೆಯೋ ಅಥವಾ ಚಂಬಲ್ ಕಣಿವೆ ಗೂಂಡಾಗಳ ರೀತಿ ಆಡಳಿತ ನಡೆಯುತ್ತಿದೆಯೋ ಎಂದು ಪ್ರಶ್ನೆ ಮಾಡಿದರು.

Edited By : Ashok M
PublicNext

PublicNext

20/12/2024 12:57 pm

Cinque Terre

35.93 K

Cinque Terre

4

ಸಂಬಂಧಿತ ಸುದ್ದಿ