ಶಿವಮೊಗ್ಗ: ಭದ್ರಾವತಿ ಚನ್ನಗಿರಿ ರಸ್ತೆಯಲ್ಲಿ ಆರ್‌ಎಂಸಿ ಮುಂಭಾಗದ ಶ್ರೀಗಣೇಶ ರೈಸ್ ಮಿಲ್ ನಲ್ಲಿ ಬಾಯ್ಲರ್ ಸ್ಫೋಟಗೊಂಡು 7 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟಗೊಂಡ ಸ್ಥಳದಲ್ಲಿ ಕಣ್ಮರೆಯಾದ ರಘು ಎಂಬಾತ ನಿಗಾಗಿ ಹುಡುಕಾಟ ನಡೆಯುತ್ತಿದೆ.
ಸ್ಫೋಟದಿಂದ ಸಾಕಷ್ಟು ಸೊತ್ತುಗಳು ನಾಶವಾಗಿದ್ದು, ಅಕ್ಕಪಕ್ಕದ ಒಂದೆರಡು ಮನೆಗಳೂ ಹಾನಿಗೊಂಡಿವೆ.
ಸ್ಥಳದಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಬಿರುಸಿನ ಕಾರ್ಯಾಚರಣೆ ಕೈಗೊಂಡಿದ್ದಾರೆ.
PublicNext
19/12/2024 10:27 pm