ಹೊಸದುರ್ಗ : ಸಾಹಿತ್ಯದಿಂದ ಈ ನೆಲದ ಸಾಂಸ್ಕೃತಿಕ ಬದುಕು ಕಟ್ಟುವ ಕೆಲಸ ಆಗಬೇಕು. ವಿದ್ಯಾರ್ಥಿ ದೆಸೆಯಿಂದಲೇ ಇವುಗಳ ಸಂರಕ್ಷಣೆ ಆಗಬೇಕು. ಈ ನೆಲದ ಮೂಲ ಕವಿ ಬಿಳಿಗೆರೆ ಕೃಷ್ಣಮೂರ್ತಿ ಅವರ
ಛೂಮಂತ್ರಯ್ಯನ
ಕಥೆಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದು ನಮ್ಮೆಲರಿಗೂ ಹೆಮ್ಮೆಯ ವಿಷಯ.
ಪ್ರತಿ ಶಾಲಾ ಕಾಲೇಜುಗಳಲ್ಲಿ ನಾಡಿನ ಕವಿ,ಕಾವ್ಯ ಕಥೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕೆಲಸವನ್ನ ಹೆಜ್ಜೆ ಸಾಲು ಸಾಂಸ್ಕೃತಿಕ ವೇದಿಕೆ ಮಾಡುತ್ತಿದೆ ಎಂದು ವೇದಿಕೆ ಅಧ್ಯಕ್ಷ ಗೋ ತಿಪ್ಪೇಶ್ ತಿಳಿಸಿದರು.
ತಾಲೂಕಿನ ಶ್ರೀರಾಂಪುರ ಹೋಬಳಿಯ ನಾಯಿಗೆರೆ ಬಳಿ ಇರುವ ಇಂದಿರಾಗಾಂಧಿ ವಸತಿಯುತ ಶಾಲೆಯಲ್ಲಿ ಬುದುವಾರ ಆಯೋಜಿಸಿದ್ದ ಬಿಳಿಗೆರೆ ಕೃಷ್ಣಮೂರ್ತಿ ಅವರ ಛೂಮಂತ್ರಯ್ಯನ ಕಥೆಗಳು ಕುರಿತು ವಿದ್ಯಾರ್ಥಿಗಳೊಂದಿಗೆ ನಡೆಸಿದ ಚಿಂತನ - ಮಂಥನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಕಾರ್ಯಕ್ರಮವನ್ನ ಉದ್ಘಾಟಿಸಿದ ಹಿರಿಯ ಸಾಹಿತಿ ಪಿ.ಎಲ್.ಲೋಕೇಶ್ವರ್ ಮಾತನಾಡಿ ತಾಲೂಕಿನಲ್ಲಿ ಸಾಹಿತ್ಯ ಕವಿ ಕಾವ್ಯ ಕಥೆಗಳ ಕುರಿತು, ಚಿಂತನ - ಮಂಥನ ಕಾರ್ಯಕ್ರಮಗಳು ಬಹಳಷ್ಟು ಕಡಿಮೆ ಆಗುತ್ತಿದ್ದು ಹೆಜ್ಜೆ ಸಾಲು ಸಾಂಸ್ಕೃತಿಕ ವೇದಿಕೆ ತಂಡ ಅತ್ಯುತ್ತಮವಾದ ಕಾರ್ಯಕ್ರಮ ಮಾಡುತ್ತಿದೆ ಎಂದು ಪ್ರಶಂಸಿದರು.
ಈ ವೇಳೆ ಇಂದಿರಾ ಗಾಂಧಿ ವಸತಿಯುತ ಶಾಲೆಯ ಪ್ರಾಚಾರ್ಯ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಸಾಹಿತಿ ನಾಗತಿಹಳ್ಳಿ ಮಂಜುನಾಥ್.ನಿಸಾರ ಅಹಮದ್.ಕವಯಿತ್ರಿ ಕುಮಾರಿ ಎಂ.ಆರ್.ನಳಿನ.ನಿವೃತ್ತ ಶಿಕ್ಷಕ ರಾಜಪ್ಪ ಕಲಾವಿದ ಪಿಲಾಪುರ ಆರ್ ಕಂಠೇಶ್.ಭರತ್.ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಉಪಸ್ಥಿತರಿದ್ದರು.
Kshetra Samachara
18/12/2024 11:05 am