ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಹೃದಯಘಾತದಿಂದ ರಾಜ್ಯಮಟ್ಟದ ಕಬಡ್ಡಿ ಆಟಗಾರ ಸಾವು

ಮಂಡ್ಯ:ರಾಜ್ಯಮಟ್ಟದ ಕಬಡ್ಡಿ ಆಟಗಾರ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಜರುಗಿದೆ.

ರಾಜ್ಯಮಟ್ಟದ ಕಬಡ್ಡಿ ಆಟಗಾರ,‌ ಉಡುಪಿಯ ಮುಟ್ಲುಪಾಡಿ,‌ ನಡುಮನೆ ನಿವಾಸಿ ಪ್ರೀತಂ ಶೆಟ್ಟಿ(26)ಎಂಬ ಯುವಕನೇ ಕಬಡ್ಡಿ ಆಡುವಾಗ ಮೃತಪಟ್ಟಿರುವ ದುರ್ದೈವಿ ಯಾಗಿದ್ದಾನೆ.

ಮಂಡ್ಯ ಜಿಲ್ಲೆ, ನಾಗಮಂಗಲದ ಸುಖಧರೆ ಗ್ರಾಮದಲ್ಲಿ ಹನುಮ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಆಟವಾಡುವಾಗ ಘಟನೆ ಜರುಗಿದೆ.

ಶುಕ್ರವಾರ (ಡಿ.13) ರಾತ್ರಿ ಕಬಡ್ಡಿ ಆಟ ಆಡುವಾಗಲೇ ಹೃದಯಘಾತದಿಂದ ಕಬಡ್ಡಿ ಕೋರ್ಟ್ ನಲ್ಲೇ ಮೃತಪಟ್ಟಿದ್ದಾನೆ

ಪ್ರತಿಭಾನ್ವಿತ ಪ್ರೀತಂ ಶಿಕ್ಷಣದ ಜತೆಗೆ ಕ್ರೀಡೆಯಲ್ಲಿಯೂ ಆಸಕ್ತನಾಗಿದ್ದು ಸ್ವಂತ ಶ್ರಮ ಕಬಡ್ಡಿ ಆಟಗಾರನಾಗಿ ಖ್ಯಾತಿ ಪಡೆದಿದ್ದ.ಪ್ರೀತಂ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ.

Edited By : Somashekar
PublicNext

PublicNext

14/12/2024 02:50 pm

Cinque Terre

10.86 K

Cinque Terre

2