ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣ, ಅನುಕುಮಾರ್‌ಗೆ ಜಾಮೀನು ಮಂಜೂರು - ಸಂತಸ ವ್ಯಕ್ತಪಡಿಸಿದ ತಾಯಿ

ಚಿತ್ರದುರ್ಗ- ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಕೋರ್ಟ್ ಜಾಮೀನು ನೀಡಿದೆ. ಈ ಕುರಿತಾಗಿ ಆರೋಪಿ ಅನುಕುಮಾರ್ ತಾಯಿ ಜಯಮ್ಮ ಇಂದು (ಶುಕ್ರವಾರ) ಸಂಜೆ 4 ಗಂಟೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಮಗನಿಗೆ ಜಾಮೀನು ಸಿಕ್ಕಿದೆ ಅಂತ ಮಾಧ್ಯಮಗಳಲ್ಲಿ‌ ನೋಡಿದೆ. ಸತತ ಏಳು ತಿಂಗಳಿಂದ ದುಡಿಯುವ ಮಗ ಇಲ್ಲದೆ ಕಷ್ಟ ನಾವು ಅನುಭವಿಸಿದ್ದೇವೆ. ಹೂ ಕಟ್ಟಿ ಕೂಲಿ ಮಾಡಿ ಜೀವನ ನಡೆಸಿದ್ದೇನೆ. ನನ್ನ ಗಂಡ ಸತ್ತು, ನಾನೂ ಹುಷಾರಿಲ್ಲದೆ ಚಿಕಿತ್ಸೆ ಪಡೆದಿದ್ದೇನೆ.

ಈಗ ಕೋರ್ಟ್ ಜಾಮೀನು ನೀಡಿದೆ, ದುಡಿಯುವ ಮಗ ಮನೆಗೆ ಬರುತ್ತಾನೆ ಎನ್ನುವ ಸಂತೋಷವಿದೆ ಎಂದು ಹೇಳಿದರು.

Edited By : Shivu K
PublicNext

PublicNext

13/12/2024 05:06 pm

Cinque Terre

8.82 K

Cinque Terre

0

ಸಂಬಂಧಿತ ಸುದ್ದಿ