ಚಿತ್ರದುರ್ಗ : ಚಿತ್ರದುರ್ಗ ತಾಲೂಕಿನ ಹೊಸ ಕಲ್ಲಹಳ್ಳಿ ಗ್ರಾಮದಲ್ಲಿ ಜಲ್‌ಜೀವನ್ ಮಿಷನ್ ಯೋಜನೆಯಡಿ ಸಂಪರ್ಕ ಕಲ್ಪಿಸಲು ಸಿಮೆಂಟ್ ರಸ್ತೆ ಕೊರೆದಿದ್ದು, ಸಂಪೂರ್ಣವಾಗಿ ತಗ್ಗು ಮುಚ್ಚದೇ ರಸ್ತೆ ಗುಂಡಿಮಯವಾಗಿದ್ದು ಗ್ರಾಮಸ್ಥರು ಗುತ್ತಿಗೆದಾರರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಜಲ್‌ಜೀವನ್ ಮಿಷನ್ ಯೋಜನೆಯಡಿ ನಲ್ಲಿ ಹಾಗೂ ಪೈಪ್ ಅಳವಡಿಸಲು ಗುತ್ತಿಗೆದಾರರು ಗ್ರಾಮದಲ್ಲಿನ ಸಿಎಂಟ್ ರಸ್ತೆ ಕೊರೆದು ಸಲ್ಲಿ ಸಂಪರ್ಕ ಪ್ರತೀ ಮನೆಗೆ ನೀಡಲಾಗಿದೆ.
ಆದ್ರೆ ತಗ್ಗುಗಳನ್ನು ಸಂಪೂರ್ಣವಾಗಿ ಮುಚ್ಚದೇ ಅರ್ಧಂಬರ್ಧ ಕಾಮಗಾರಿ ಮಾಡಿದ್ದಾರೆ ಅಂತಾ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಕಾಮಗಾರಿ ಸ್ಥಗಿತವಾಗಿ ವರ್ಷಗಳೇ ಸಮೀಪಿಸುತ್ತಿದ್ರೂ ಗುತ್ತಿಗೆದಾರರಾಗಲೀ, ಸ್ಥಳೀಯ ಗ್ರಾಮ ಪಂಚಾಯತ ಅಧಿಕಾರಿಗಳಾಗಲೀ ತಿರುಗಿ ನೀಡ್ತಿಲ್ಲ. ಇನ್ನು ನೆಲದಲ್ಲಿ ಹಾಕಿರುವ ಪೈಪ್ ಲೈನ್ ಒಡೆದು ಗ್ರಾಮವೆಲ್ಲ ಕೊಳಚೆ ಎದ್ದು ನಾರುತ್ತಿದೆ. ವೈದ್ಧರು, ಮಕ್ಕಳು ನಿರ್ಭೀತಿಯಿಂದ ಓಡಾಡದಂತಾಗಿದೆ.
ಕೂಡಲೇ ಈ ಅವ್ಯವಸ್ಥೆ ಸರಿಪಡಿಸಿ ಅಂತಾ ಗ್ರಾಮಸ್ಥರು ಗುತ್ತಿಗೆದಾರರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
PublicNext
11/12/2024 10:49 pm