ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಜಯಪ್ರದಾ ಕಂಡಂಗೆ ಕಾಣ್ತಿದ್ದೀಯಮ್ಮ - ನಟ ದೊಡ್ಡಣ್ಣ ಹಾಸ್ಯ

ಚಿತ್ರದುರ್ಗ: ಕಣ್ಣು ಆಪರೇಷನ್ ಮಾಡಿಸಿದ್ದ ಮಹಿಳೆಗೆ ಕನ್ನಡ ತೊಡಿಸಿ, ನೀನು ಜಯಪ್ರದಾ ಕಂಡಂಗೆ ಕಾಣ್ತಿದ್ದೀಯಮ್ಮ ಅಂತ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾವ, ಹಿರಿಯ ನಟ ದೊಡ್ಡಣ್ಣ ಹಾಸ್ಯ ಚಟಾಕಿ ಹಾರಿಸಿರುವ ವಿಡಿಯೋ ಸದ್ಯ ಸಾಕಷ್ಟು ವೈರಲ್ ಆಗಿದೆ.

ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನೇತೃತ್ವದಲ್ಲಿ ದೃಷ್ಟಿ ದೋಷವಿರುವವರಿಗೆ ಉಚಿತವಾಗಿ ನೇತೃ ತಪಾಸಣೆ, ಆಪರೇಷನ್ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ನೇತೃ ತಪಾಸಣಾ ಶಿಬಿರ ನಡೆಸಲಾಗುತ್ತಿದೆ. ಈ ವೇಳೆ ತಾಲೂಕಿನ ಹಳೆದ್ಯಾಮವ್ವನಹಳ್ಳಿಯಲ್ಲಿ 75 ಜನರಿಗೆ ಕನ್ನಡಕ ವಿತರಣೆಯಲ್ಲಿ ನಟ ದೊಡ್ಡಣ್ಣ ಭಾಗಿಯಾಗಿದ್ರು. ಈ ವೇಳೆ ಹಿರಿಯ ನಟ ದೊಡ್ಡಣ್ಣ ಮಹಿಳೆಯೊಬ್ಬರಿಗೆ ಕನ್ನಡಕ ತೊಡಿಸಿ ನೀನು ಜಯಪ್ರದಾ ಕಂಡಂಗಡ ಕಾಣ್ತಿದ್ದೀಯಮ್ಮ ಅಂತ ಹಾಸ್ಯ ಚಟಾಕಿ ಹಾರಿಸಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.

Edited By : Shivu K
PublicNext

PublicNext

10/12/2024 10:33 pm

Cinque Terre

26.29 K

Cinque Terre

0

ಸಂಬಂಧಿತ ಸುದ್ದಿ