ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿ ವಿಧಾನಸಭಾ ಚುನಾವಣೆ: 5 ಗ್ಯಾರಂಟಿಗಳಲ್ಲಿ ಆಟೋ ಚಾಲಕರಿಗೂ ಬಂಪರ್ ಗಿಫ್ಟ್ ನೀಡಿದ ಕೇಜ್ರಿವಾಲ್

ನವದೆಹಲಿ: ಆಮ್‌ ಆದ್ಮಿ ಪಕ್ಷ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಂಗಳವಾರ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಆಟೋ ಚಾಲಕರಿಗೆ 10 ಲಕ್ಷ ರೂಪಾಯಿ ಮೌಲ್ಯದ ಜೀವ ವಿಮೆ ಸೇರಿದಂತೆ ಐದು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ.

ಎಎಪಿ ಎಲ್ಲಾ ಆಟೋ ಚಾಲಕರ ಮಗಳ ಮದುವೆಗೆ 1 ಲಕ್ಷ ರೂಪಾಯಿ ಘೋಷಿಸಿತು ಮತ್ತು ಸಮವಸ್ತ್ರ ಖರೀದಿಸಲು ಭತ್ಯೆಯಾಗಿ ದೀಪಾವಳಿ ಮತ್ತು ಹೋಳಿಯಲ್ಲಿ 2,500 ರೂಪಾಯಿ ನೀಡುವುದಾಗಿ ಭರವಸೆ ನೀಡಿದೆ.

ದೆಹಲಿಯಲ್ಲಿ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಯಲ್ಲಿ ಎಎಪಿ ಭರ್ಜರಿ ತಯಾರಿ ನಡೆಸಿದೆ.

Edited By : Vijay Kumar
PublicNext

PublicNext

10/12/2024 07:35 pm

Cinque Terre

19.64 K

Cinque Terre

0