ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಟ್ರ್ಯಾಕ್ಟರ್ ಮೂಲಕ ಆಗಮಿಸಿದ ಪಂಚಮಸಾಲಿ ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಬೆಳಗಾವಿ : ಪಂಚಮಸಾಲಿ ಹೋರಾಟದ ಮೇಲೆ ನಿರ್ಬಂಧ ಹೇರಿದ್ದ ಜಿಲ್ಲಾಡಳಿತ, ಅದನ್ನು ತೆರವುಗೊಳಿಸಿದೆ. ಈ ಹಿನ್ನಲೆ ಯಾರೂ ಭಯಭೀತರಾಗದೇ ಶಾಂತಿಯುತವಾಗಿ ಹೋರಾಟದಲ್ಲಿ ಭಾಗವಹಿಸಿ ಎಂದು ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದರು.

ಈ ಹಿನ್ನಲೆ ಇಂದು ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಜನರು ಪಾಲ್ಗೊಂಡ ಸಮಾವೇಶ ನಡೆಯಲು ಆರಂಭವಾಯಿತು. ಈ ಹಿನ್ನಲೆ ತೀವ್ರ ಸ್ವರೂಪ ಪಡೆಯುತ್ತಿರುವ ಪಂಚಮಸಾಲಿ ಹೋರಾಟ ಪಡೆದಿದೆ. ಇನ್ನು ಜಿಲ್ಲಾಧಿಕಾರಿ ಆದೇಶ ಮೀರಿ ಟ್ರ್ಯಾಕ್ಟರ್ ಚಳುವಳಿ ನಡೆಸಲು ಪ್ರಯತ್ನ ಮಾಡಿರುವ ಹಿನ್ನಲೆ

ಹೀರೆ ಬಾಗೇವಾಡಿ ಟೋಲ್ ಬಳಿ ಟ್ರ್ಯಾಕ್ಟರ್ ಗಳನ್ನು ಪೊಲೀಸರು ತಡೆದಿದ್ದಾರೆ‌.

ಟ್ರ್ಯಾಕ್ಟರ್ ಆಗಮಿಸದಂತೆ ಬ್ಯಾರಿಕೇಡ್ ಅಳವಡಿಸಿ ಪೋಲಿಸ್ ಬಿಗಿ ಬಂದೋಬಸ್ತ್‌ ಮಾಡಿದ ಪೊಲೀಸರು

ಟ್ ಹೋರಾಟಗಾರರನ್ನು ವಶಕ್ಕೆ ಪಡೆದಿದ್ದಾರೆ. ಇದೆ ವೇಳೆ ಹೋರಾಟಗಾರರು ಸಿಎಂ ಸಿದ್ದರಾಮಯ್ಯ ಹಾಗೂ ಪೊಲೀಸರಿಗೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿ ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು ಅವಕಾಶ ಇದೆ. ನಮ್ಮನ್ನು ಏಕೆ ತಡೆಯುತ್ತೀರಿ? ಎಂದು ಪೋಲಿಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದೆ ವೇಳೆ ಹೋರಾಟ ತಡೆದ ಕ್ರಮವನ್ನು ಖಂಡಿಸಿ ಹೋರಾಟಗಾರರು ಟೋಲ್ ಬಳಿ ಬರುತ್ತಿರುವ ಕೆಎಸ್ಆರ್‌ಟಿಸಿ ಬಸ್ ಹತ್ತಿ, ಜೈ ಪಂಚಮಸಾಲಿ ಎಂದು ಘೋಷಣೆ ಕೂಗಿ ಬಸ್ ಮೂಲಕ ಪ್ರತಿಭಟನೆ ಟೆಂಟ್ ಗೆ ಆಗಮಿಸಲು ಪಂಚಮಸಾಲಿಯ ಹೋರಾಟಗಾರರು ಮುಂದಾಗಿದ್ದಾರೆ. ಹೀಗಾಗಿ ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಡೆವಂತಾಯಿತು.

Edited By : Ashok M
PublicNext

PublicNext

10/12/2024 03:21 pm

Cinque Terre

19.31 K

Cinque Terre

0

ಸಂಬಂಧಿತ ಸುದ್ದಿ