ಚಿತ್ರದುರ್ಗ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಚಿತ್ರದುರ್ಗ ನಗರದ ಓಬವ್ವ ವೃತ್ತದಲ್ಲಿ ಮಾಧಿಗರ ಸಾಂಸ್ಕೃತಿಕ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದರು.
ಓಬವ್ವ ವೃತ್ತದಲ್ಲಿ ಘೋಷಣೆಗಳನ್ನ ಕೂಗುತ್ತಾ ದಲಿತ ಸಚಿವರುಗಳನ್ನ ವಜಾ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಆಕ್ರೋಶವನ್ನ ಹೊರ ಹಾಕಿದ್ದರು.
ಒಳಮೀಸಲಾತಿ ಜಾರಿಯಾಗುವ ತನಕ ಹೊಸ ನೇಮಕಾತಿಗಳು ಮತ್ತು ಮುಂಬಡ್ತಿಗಳು ತಡೆಯಾಗಬೇಕು. ಸರ್ಕಾರದ ಆದೇಶವನ್ನು ಉಲ್ಲಂಘಿಸುತ್ತಿರುವ ಸಚಿವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು, ಒಳಮೀಸಲಾತಿ ವಿರೋಧಿ ಸಭೆಗಳಲ್ಲಿ ಭಾಗವಹಿಸುವ ಸಚಿವರುಗಳ ಶಾಸಕರ ಅಧಿಕಾರಿಗಳ, ನೌಕರರ ವಿರುದ್ಧ ಕ್ರಮಕೈಗೊಳ್ಳಬೇಕೆಂದರು.
ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ಕಾರ್ಯ ನಿರ್ವಹಿಸಲು ಅಗತ್ಯವಾದ ಪರಿಕರಗಳನ್ನು ಸವಲತ್ತುಗಳನ್ನು ಸರ್ಕಾರವು ತಡವಾಗಿ ನೀಡಿರುವ ರೀತಿಯಲ್ಲಿ ತಡಮಾಡದೆ ಅವರ ವರದಿಯನ್ನು ಸಲ್ಲಿಸಿದ ತಕ್ಷಣವೇ ಸಮ್ಮತಿಸಿ ಒಪ್ಪಿಕೊಳ್ಳಬೇಕು. ಒಳಮೀಸಲಾತಿ ಜಾರಿಗೆಯಾಗುವ ತನಕ ಸರ್ಕಾರವು SCP ಹಣವನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನ ಕೂಗುತ್ತಾ ಆಕ್ರೋಶವನ್ನ ವ್ಯಕ್ತಪಡಿಸಿದ್ದರು.
Kshetra Samachara
10/12/2024 12:18 pm