ಕೊಪ್ಪ: ದತ್ತ ಜಯಂತಿ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳ ಕೊಪ್ಪ ಸಂಯುಕ್ತ ಆಶ್ರಯದಲ್ಲಿ ಡಿ. 11 (ನಾಳೆ ಬುಧವಾರ) ಕೊಪ್ಪ ಪಟ್ಟಣದಲ್ಲಿ ಹಿಂದೂ ಸಂಗಮ ಹಾಗೂ ಬೃಹತ್ ಬೈಕ್ ಜಾಥ ನಡೆಯಲಿದೆ ನಾಳೆ ಸಂಜೆ 4-30ಕ್ಕೆ ಕೊಪ್ಪದ ಕುವೆಂಪು ವೃತ್ತದಿಂದ ಬಸ್ ನಿಲ್ದಾಣದವರೆಗೆ ಬೈಕ್ ಜಾಥ ನಡೆಯಲ್ಲಿದ್ದು ನಂತರ ಸಭಾ ಕಾರ್ಯಕ್ರಮ ನಡೆಯಲಿದೆ.
ಬಸ್ ನಿಲ್ದಾಣದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣವನ್ನು ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಮಾಡಲಿದ್ದು, ಸಭೆಯ ಅಧ್ಯಕ್ಷತೆಯನ್ನು ವಿಜೇಶ್ ಕಾರಂಜಿ ರವರು ವಹಿಸಿಕೊಳ್ಳಲಿದ್ದಾರೆ.
Kshetra Samachara
10/12/2024 10:53 am