ಮಂಗಳೂರು: ನಗರ ಕಮಿಷನರ್ ಅನುಪಮ್ ಅಗ್ರವಾಲ್ ವರ್ಗಾವಣೆಗೆ ಒತ್ತಾಯಿಸಿ ಸಿಪಿಐಎಂ ಮುಡಿಪು ವಲಯ ಸಮಿತಿ ಮತ್ತು ಡಿವೈಎಫ್ಐ ಮುಡಿಪು ಘಟಕದ ನೇತೃತ್ವದಲ್ಲಿ ಮುಡಿಪು ಜಂಕ್ಷನ್‌ನಲ್ಲಿ ಧರಣಿ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್, ಜನಪರವಾದ ಹೋರಾಟ ಮಾಡಿದವರ ಮೇಲೆ ಕಮಿಷನರ್ ಪ್ರಕರಣ ದಾಖಲು ಮಾಡುತ್ತಾರೆ. ಹಿಂದುತ್ವದ ಸಂಘಟನೆಗಳಿಗೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಲು ಅನುಮತಿ ಕೊಡುತ್ತಾರೆ. ಮಂಗಳೂರಿನಲ್ಲಿರುವುದು ಪ್ರಜಾಪ್ರಭುತ್ವ ಸರಕಾರ ಅಥವಾ ಪೊಲೀಸ್ ರಾಜ್ಯವಾ ಎಂದು ಪ್ರಶ್ನಿಸಿದರು.
ರಾತ್ರಿ ಸಮಯದಲ್ಲಿ 95 ಶೇಕಡಾ ಜನರು ಪೊಲೀಸರಿಂದ ನೆಮ್ಮದಿಯಿಂದ ಮಲಗುತ್ತಾರೆ ಎನ್ನುವ ಸ್ಪೀಕರ್ ಸಾಹೇಬರು ಮೊನ್ನೆ ಹಾಡು ಹಗಲೇ ಅಂಗನವಾಡಿಗೆ ನುಗ್ಗಿದ ಡಕಾಯಿತರು ಅಂಗನವಾಡಿ ಕಾರ್ಯಕರ್ತೆಯ ಸರವನ್ನೇ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಆ ಸಮಯದಲ್ಲಿ ನಿಮ್ಮ ಪೊಲೀಸ್ ಎಲ್ಲಿ ಹೋಗಿತ್ತು ಎಂದರು.
Kshetra Samachara
09/12/2024 10:16 pm