ರಾಮದುರ್ಗ: ನೂತನ ಕೋರ್ಟ್ ನಿರ್ಮಾಣಕ್ಕೆ ಭೂಸ್ವಾಧೀನ ಪಡಿಸಿಕೊಂಡು ಹಣ ನೀಡದೇ ಇರುವುದಕ್ಕೆ ಲೋಕೋಪಯೋಗಿ ಇಲಾಖೆಗೆ ಸೇರಿದ ಪೀಠೋಪಕರಣಗಳನ್ನು ಜಿಲ್ಲಾ ನ್ಯಾಯಾಲಯ ಜಪ್ತಿ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ.
ರಾಮದುರ್ಗ ಪಟ್ಟಣದಲ್ಲಿ ನೂತನ ನ್ಯಾಯಾಲಯ ನಿರ್ಮಾಣಕ್ಕೆ ಸ್ಥಳೀಯರಾದ ನ್ಯಾಯವಾದಿ ಶಿವಾನಂದ ಸಾಗಶೆಟ್ಟಿ ಎಂಬುವರ ಭೂಮಿಯನ್ನು ಸುಮಾರು 50 ಕೋಟಿ ರೂಪಾಯಿಗೆ ಭೂಸ್ವಾಧೀನ ಮಾಡಲಾಗಿತ್ತು. ಕೋರ್ಟ್ ಕಟ್ಟಡ ಪೂರ್ಣಗೊಂಡರು ಹಣ ನೀಡಿಲ್ಲ. 50 ಕೋಟಿ ಜೊತೆಗೆ ಬಡ್ಡಿಹಣ ಸೇರಿ ಸುಮಾರು 58 ಕೋಟಿ ರೂಪಾಯಿ ಹಣವನ್ನು ಇಲಾಖೆ ನೀಡಬೇಕಿದೆ. ಹಾಗೂ ಹೈಕೋರ್ಟ್ ಆದೇಶ ಕೂಡ ಇಲಾಖೆ ಉಲ್ಲಂಘನೆ ಮಾಡಿದೆ.
ಇದರಿಂದ ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ಪೀಠೋಪಕರಣಗಳ ಜಪ್ತಿ ಮಾಡುವಂತೆ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿತ್ತು ಅದರಂತೆ ಇಂದು ಪಟ್ಟಣದ ಮಿನಿ ವಿಧಾನಸೌಧದ ಹತ್ತಿರ ಇರುವ ಲೋಕೋಪಯೋಗಿ ಇಲಾಖೆಗೆ ಸೇರಿದ ಪೀಠೋಪಕರಣಗಳ ಜಪ್ತಿ ಮಾಡಲಾಯಿತು. ಈ ಘಟನೆ ಕುರಿತು ಹೈಕೋರ್ಟ್ ನ್ಯಾಯವಾದಿ ಸೌರಭ ಮಿರ್ಜಿ ಮಾಹಿತಿ ನೀಡಿದ್ದಾರೆ.
PublicNext
09/12/2024 09:21 pm