ಅಂಕೋಲಾ : ಮನೆಯಲ್ಲಿ ಜನರು ಮಲಗಿರುವಾಗಲೇ ಕನ್ನ ಹಾಕಿದ ಕಳ್ಳರು ಲಕ್ಷಾಂತರ ರೂ ಬೆಲೆಬಾಳುವ ದೇವರ ಮೂರ್ತಿಗಳನ್ನು ಕದ್ದೊಯ್ದ ಘಟನೆ ತಾಲೂಕಿನ ಹಿಲ್ಲೂರು ತಿಂಗಳಬೈಲಿನಲ್ಲಿ ನಡೆದಿದೆ.
ವೃತ್ತಿಯಲ್ಲಿ ಪಿಡಿಓ ಆಗಿರುವ ವಿಠ್ಠಲ ವಾಸು ಬಾಂದಿ ಇವರು ಈ ಕುರಿತು ದೂರು ನೀಡಿದ್ದು ಡಿಸೆಂಬರ 8 ಮದ್ಯರಾತ್ರಿಯಿಂದ ನಸುಕಿನ 2.30 ಗಂಟೆಯ ಮಡುವಿನ ಅವಧಿಯಲ್ಲಿ ಮನೆಯ ಜನರು ಮನೆಯಲ್ಲಿ ಮಲಗಿರುವಾಗ, ಯಾರೋ ಕಳ್ಳರು ಮನೆಯ ಒಳಗೆ ಪ್ರವೇಶಿಸಿ, ದೇವರ ಕೋಣೆಯ ಬೀಗ ಮುರಿದು, ದೇವರ ಕೋಣೆಯಲ್ಲಿದ್ದ ಅಂದಾಜು 1 ಲಕ್ಷ 30 ಸಾವಿರ ರೂ. ಬೆಲೆಬಾಳುವ ಹಿತ್ತಾಳೆ ಲೋಹದ ದೇವರ 47 ಮೂರ್ತಿಗಳು, 5 ಕಪಿಲ್ ಕಲ್ಲುಗುಂಡುಗಳು ಹಾಗೂ ವಿಠಲ ಬಾಂದಿ ಅವರ ಹೆಂಡತಿಯ ಹಳೆಯ ನೊಕಿಯಾ ಮೊಬೈಲನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.
Kshetra Samachara
09/12/2024 09:19 pm