ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮಧ್ಯಂತರ ಜಾಮೀನಿನ ಮೇಲಿರುವ ನಟ ದರ್ಶನ್‌ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಇದೇ ತಿಂಗಳು 11ಕ್ಕೆ ಜಾಮೀನು ದಿನಾಂಕ ಮುಗಿಯಲಿದ್ದು, ಅದೇ ದಿನ ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ಕೂಡಾ ಫಿಕ್ಸ್ ಆಗಿದೆ.
ನಟ ದರ್ಶನ್ ಶಸ್ತ್ರ ಚಿಕಿತ್ಸೆ ನೆಪದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೆ ಮಧ್ಯಂತರ ಜಾಮೀನಿನ 6 ವಾರಗಳ ಕಾಲಾವಕಾಶ ಇದೇ ತಿಂಗಳು 11ಕ್ಕೆ ಮುಕ್ತಾಯವಾಗುತ್ತದೆ. ಆದ್ರೆ ನಟ ದರ್ಶನ್ ಇನ್ನೂ ಕೂಡಾ ಯಾವುದೇ ಶಸ್ತ್ರ ಚಿಕಿತ್ಸೆ ಪಡೆದಿಲ್ಲ. ಇದೇ ವಿಚಾರಕ್ಕೆ ನ್ಯಾಯಾಲಯಕ್ಕೆ ಸುಳ್ಳು ಹೇಳಿ ಮಧ್ಯಂತರ ಜಾಮೀನು ಪಡೆದಿದ್ದಾರೆ. ಆದರೆ ಯಾವುದೇ ಶಸ್ತ್ರಚಿಕಿತ್ಸೆ ಪಡೆದಿಲ್ಲ. ಈ ಕಾರಣದಿಂದಾಗಿ ನಟ ದರ್ಶನ್‌ಗೆ ನೀಡಿರುವ ಮಧ್ಯಂತರ ಜಾಮೀನನ್ನ ರದ್ದು ಪಡಿಸಬೇಕು ಅಂತ SPP ಪ್ರಸನ್ನ ಕುಮಾರ್ ವಾದ ಮಂಡಿಸಿದ್ರು. ಅಷ್ಟೇ ಅಲ್ಲದೇ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಪಾತ್ರ, ಪವಿತ್ರ ಗೌಡರ ಪಾತ್ರ ಹೆಚ್ಚಾಗಿದೆ. ಹಣ ರಿಕವರಿ, ಕಿಡ್ನಾಪ್, ಹಲ್ಲೆ, ವಿಕೃತಿ ಮರೆದಿರುವುದರ ಜೊತೆ ರೇಣುಕಾಸ್ವಾಮಿಯನ್ನ ಕಟ್ಟಿಗೆಯಿಂದ ಹಲ್ಲೆ ಮಾಡಿರುವ ಬಗ್ಗೆ ಮೇಲಿಂದ ಎತ್ತಿ ಕುಕ್ಕಿರುವ ಬಗ್ಗೆ ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ್ದರಿಂದ 17 ಎದೆ ಮೂಳೆ ಮುರಿತವಾಗಿರುವುದರ ಜೊತೆ ದೇಹದಲ್ಲಿ 39 ಗಾಯಗಳು ಪತ್ತೆಯಾಗಿರುವ ಬಗ್ಗೆ SPP ಪ್ರಸನ್ನ ಕುಮಾರ್ ಪ್ರಭಲವಾಗಿ ವಾದ ಮಂಡಿಸಿದ್ರು.
ಅಷ್ಟೇ ಅಲ್ಲದೇ ರೇಣುಕಾ ಸ್ವಾಮಿಯನ್ನು ಕಿಡ್ನಾಪ್ ಮಾಡಿದ ಸಿಸಿ ಕ್ಯಾಮೆರಾ ವಿಡಿಯೋಗಳು, ಹಲ್ಲೆ ಮಾಡಲು ಬಳಸಿದ ಮೆಗ್ಗಾರ್ ಕಟ್ಟಿಗೆ, ಶೂ ಸೇರಿದಂತೆ ಪವಿತ್ರಾಗೌಡರನ್ನು ಕರೆದೊಯ್ಯಲು ದರ್ಶನ್ ಮತ್ತಿತರರು ಬಂದಿರುವ ಸಂದರ್ಭದ ವಿಡಿಯೋ ಅಕ್ಕಪಕ್ಕದ ಮನೆಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿರೋದು. ಶೆಡ್‌ನಲ್ಲಿ ವಿಕೃತಿ ಮೆರೆದಾಗ ಸಿಕ್ಕಿರೋ ಸಾಕ್ಷಿಗಳ ಉಲ್ಲೇಖಗಳ ಬಗ್ಗೆ SPP ಪ್ರಸನ್ನಕುಮಾರ್ ಎರಡು ಗಂಟೆಗಳ ಕಾಲ ಸುದೀರ್ಘವಾದ ವಾದ ಮಂಡಿಸಿದ್ರು.
ಇನ್ನು ದರ್ಶನ್‌ಗೆ ವೈದ್ಯಕೀಯ ಚಿಕಿತ್ಸೆಯ ಮಧ್ಯಂತರ ಜಾಮೀನು ಅವಧಿ ವಿಸ್ತರಣೆಗಾಗಿ ಹಿರಿಯ ವಕೀಲ ಸಿ ವಿ ನಾಗೇಶ್ ಕೂಡಾ ವಾದ ಮಂಡಿಸಿದ್ದು. ಏನು ಚಿಕಿತ್ಸೆ ನೀಡಬೇಕು. ಶಸ್ತ್ರಚಿಕಿತ್ಸೆ ಮಾಡಬೇಕೆ, ಬೇಡವೇ ಎಂಬುದನ್ನು ವೈದ್ಯರು ನಿರ್ಧರಿಸಬೇಕು. ದರ್ಶನ್ ಮಧ್ಯಂತರ ಜಾಮೀನಿನ ಮೇಲೆ ಇದ್ದು, ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರನ್ನು ಕೇಳಲಾಗುತ್ತದೆಯೇ?. ಮಧ್ಯಂತರ ಜಾಮೀನು ನೀಡುವಾಗ ನ್ಯಾಯಾಲಯ ವಿಧಿಸಿರುವ ಷರತ್ತು ಉಲ್ಲಂಘಿಸಿದರೆ ನನ್ನ ನಡತೆಯನ್ನು ಪರಿಗಣಿಸಬೇಕು ಎಂದು ದರ್ಶನ್ ಹೇಳಿಕೆ ನೀಡಿದ್ದಾರೆ.
ಡಿಸೆಂಬರ್ 11ಕ್ಕೆ ವೈದ್ಯರು ನನಗೆ ಶಸ್ತ್ರಚಿಕಿತ್ಸೆ ಮಾಡಲು ದಿನಾಂಕ ನಿಗದಿಗೊಳಿಸಿದ್ದಾರೆ. ನನ್ನಿಂದ ಮಧ್ಯಂತರ ಜಾಮೀನಿನ ಷರತ್ತು ಉಲ್ಲಂಘನೆಯಾಗಿಲ್ಲ. ವೈದ್ಯರಿಗೆ ನಿರ್ದಿಷ್ಟ ದಿನದಂದು ಶಸ್ತ್ರಚಿಕಿತ್ಸೆ ಮಾಡುವಂತೆ ಸೂಚಿಸಲಾಗವುದು. ರೇಣುಕಾಸ್ವಾಮಿ ಮೃತದೇಹದಲ್ಲಿ 2.5 ಸೆಂಟಿ ಮೀಟರ್ ಗಾಯ ಮಾತ್ರ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷಾ ವರದಿಯನ್ನು ಪ್ರಾಸಿಕ್ಯೂಷನ್ ಜೊತೆ ಸೇರಿ ವೈದ್ಯರು ತಿರುಚಿದ್ದಾರೆ. 14 ಆರೋಪಿಗಳ ಬಟ್ಟೆ ಮತ್ತಿತರ ಪರಿಕರಗಳಲ್ಲಿ ರಕ್ತದ ಕಲೆ ಪತ್ತೆಯಾಗಿದೆ ಎಂದು ಹೇಳಿರುವುದು ಹೇಗೆ ಸಾಧ್ಯ? ರೇಣುಕಾಸ್ವಾಮಿಗೆ ನೀಡಲು ಊಟ ತರಲಾಗಿದೆ ಎಂದು ಹೇಳಲಾಗಿದೆಯೇ ವಿನಃ ಆತ ತಿಂದ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಆತ ಕೊನೆಯ ಊಟ ಮಾಡಿರುವುದು ಜೂನ್ 8ರ ಮಧ್ಯಾಹ್ನ ದುರ್ಗಾ ರೆಸ್ಟೋರೆಂಟ್‌ನಲ್ಲಿ. ಹೀಗಾಗಿ ಪ್ರಾಸಿಕ್ಯೂಷನ್ ವಾದ ಸುಳ್ಳು ಅಂತ ಸಿವಿ ನಾಗೇಶ್ ವಾದ ಮಂಡಿಸಿದ್ರು.
ಇದಕ್ಕೆ ಆಕ್ಷೇಪಣೆ ಸಲ್ಲಿಸಿದ SPP ಪ್ರಸನ್ನ ಕುಮಾರ್, ಸಿ ವಿ ನಾಗೇಶ್ ಅವರ ವಾದವನ್ನು ನೋಡಿದರೆ ರೇಣುಕಾಸ್ವಾಮಿ ಸತ್ತೇ ಇಲ್ಲ, ಇಲ್ಲೇ ಇರಬೇಕು ಎನ್ನುವಂತಿದೆ ಅಂತ ಪ್ರತಿ ವಾದ ಮಂಡಿಸಿದ್ರು.
ಸದ್ಯ ವಾದ ಪ್ರತಿ ವಾದ ಆಲಿಸಿದ ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿದ್ದಾರೆ. ಇದ್ರಿಂದ ನ್ಯಾಯಾಧೀಶರು ತಮ್ಮ ಆದೇಶವನ್ನ ನೀಡೋವರೆಗೂ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಅವಧಿ ವಿಸ್ತರಣೆಯಾಗಲಿದೆ.
PublicNext
09/12/2024 07:34 pm