ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಎಂಆರ್‌ಪಿಎಲ್ ರಸ್ತೆಯ ರೈಲ್ವೆ ಮೇಲ್ಸೇತುವೆ ಕಾಂಕ್ರೀಟೀಕರಣ ಹಿನ್ನಲೆ ವಾಹನ ಸಂಚಾರಕ್ಕೆ ಬದಲಿ ರಸ್ತೆ ಆದೇಶ

ಸುರತ್ಕಲ್: ಎಂಆರ್‌ಪಿಎಲ್ ರಸ್ತೆಯ ರೈಲ್ವೆ ಮೇಲ್ಸೇತುವೆ ಕಾಂಕ್ರೀಟೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಬದಲಿ ಮಾರ್ಗ ಉಪಯೋಗಿಸುವ ಕುರಿತಂತೆ ಮಂಗಳೂರು ಕಮಿಷನರ್ ಆದೇಶ ಹೊರಡಿಸಿದ್ದಾರೆ.

ಸುರತ್ಕಲ್ ಆಸುಪಾಸಿನ ಜನರಿಗೆ ಸೂರಜ್ ಹೋಟೆಲ್ ಬಳಿಯ ಚೊಕ್ಕಬೆಟ್ಟು ರಸ್ತೆ ಹಾಗೂ ಮಂಗಳೂರು ಕಡೆಯಿಂದ ಬರುವವರಿಗೆ ಕುಳಾಯಿ ಕಾನಾ ರಸ್ತೆಯಾಗಿ ಚೊಕ್ಕಬೆಟ್ಟು ಹೋಗಲು ಬದಲಿ ಮಾರ್ಗ ಸೂಚಿಸಲಾಗಿದೆ. ಪರ್ಯಾಯ ರಸ್ತೆ ಬಳಕೆ ಹಾಗೂ ಸಂಚಾರ ನಿಷೇಧ ಕುರಿತಂತೆ ಮಂಗಳೂರು ಕಮೀಷನರ್ ಆದೇಶ ಹೊರಡಿಸಿದ್ದಾರೆ.

ಜನತೆ ಸಹಕರಿಸಬೇಕು: ಡಾ.ಭರತ್ ಶೆಟ್ಟಿ ವೈ

ಕಾಂಕ್ರೀಟೀಕರಣ ಕಾಮಗಾರಿಗೆ ಮಂಗಳೂರು ಮಹಾನಗರ ಪಾಲಿಕೆಯ ನಿಧಿಯಿಂದ 78 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದೆ. ಕಾಮಗಾರಿ ಸಂದರ್ಭ ಒಂದೆರಡು ತಿಂಗಳು ಬದಲಿ ಮಾರ್ಗ ಉಪಯೋಗಿಸುವ ಅನಿವಾರ್ಯತೆಯಿದ್ದು ವಾಹನ ಸವಾರರು ಜನರು ಸಹಕರಿಸಬೇಕು. ಶಾಶ್ವತ ಕಾಮಗಾರಿ ಮಾಡುವ ನಿಟ್ಟಿನಲ್ಲಿ ಕಾಂಕ್ರಿಟ್ ಮಾರ್ಗ ಅಗತ್ಯವಾಗಿದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಜನತೆಯಲ್ಲಿ ವಿನಂತಿಸಿಕೊಂಡಿದ್ದಾರೆ.

Edited By : Vijay Kumar
PublicNext

PublicNext

09/12/2024 06:05 pm

Cinque Terre

12.56 K

Cinque Terre

0

ಸಂಬಂಧಿತ ಸುದ್ದಿ