ಕೊಡಗು: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಮಹದೇಶ್ವರ ಬಡಾವಣೆಯಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಗುತ್ತಿಗೆದಾರನೋರ್ವ ಅನಧಿಕೃತವಾಗಿ ಕೊಳವೆಬಾವಿ ಕೊರೆಸಿರುವುದಕ್ಕೆ ಬಡಾವಣೆ ನಿವಾಸಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗುತ್ತಿಗೆದಾರ ಲೋಹಿತ್ ಎಂಬಾತ ಪಟ್ಟಣ ಪಂಚಾಯಿತಿಯಿಂದ ಯಾವುದೇ ಪೂರ್ವಾನುಮತಿಯಿಲ್ಲದೆ ಕೊಳವೆ ಬಾವಿ ಕೊರೆಸಿದ್ದ. ಶಬ್ದ ಮಾಲಿನ್ಯವಾಗುತ್ತಿರುವ ಬಗ್ಗೆ ಬಡಾವಣೆ ನಿವಾಸಿ ಡೆಂಜಿಲ್ ಫನಾಂಡೀಸ್ ದೂರು ನೀಡಿದ್ದಾರೆ. ಸೋಮವಾರಪೇಟೆ ಪಟ್ಟಣದ ಮುಖ್ಯ ರಸ್ತೆಯ ಹಾರ್ಡ್ವೇರ್ ಅಂಗಡಿಗಳ ಎದುರು ಗಂಟೆಗಟ್ಟಲೆ ಸರಕು ಸಾಮಗ್ರಿ ತುಂಬಿದ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರ ವ್ಯವಸ್ಥೆಗೆ ತೊಂದರೆಯಾಗುತ್ತಿದೆ.
ಪಟ್ಟಣದ ಮಹದೇಶ್ವರ ಬಡಾವಣೆ ಸೇರಿದಂತೆ ಹಲವು ಜನವಸತಿ ಬಡಾವಣೆಗಳಲ್ಲಿ ಅನಧಿಕೃತವಾಗಿ ಸಣ್ಣ ಕೈಗಾರಿಕೆ,ಕಾಫಿ ಡಿಪೋ,ಖಾಸಗಿ ಹಣಕಾಸು ಸಂಸ್ಥೆಗಳಿಗೆ ಪಟ್ಟಣ ಪಂಚಾಯಿತಿ ಅನುಮತಿ ನೀಡಿದ್ದು,ಸಾರ್ವಜನಿಕ ಮುಖ್ಯ ರಸ್ತೆಗಳಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಬಳಸುವ ಸಿಮೆಂಟ್ ಚೀಲಗಳು ಹಾಗೂ ಕಲ್ಲುಗಳನ್ನು ಸುರಿಯಲಾಗಿದೆ.ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಬಡಾವಣೆ ನಿವಾಸಿಗಳಾದ ಮಂಜು,ಚಂದ್ರ,ರಮೇಶ್ ದೂರಿದ್ದಾರೆ.
PublicNext
09/12/2024 05:08 pm