ಬೆಂಗಳೂರು: ನಗರದಲ್ಲಿ ಮಂಗಳಮುಖಿಯರ ದೌರ್ಜನ್ಯ ಮುಂದುವರೆದಿದೆ. ಶುಭ ಕಾರ್ಯಕ್ರಮ ಮಾಡೋ ಜನರಿಗೆ ಕೆಲವು ಮಂಗಳಮುಖಿಯರದ್ದೆ ಭಯ. ಮನೆ, ಆಫೀಸ್, ಶಾಪ್ ಮುಂದೆ ಹಬ್ಬದ ವಾತಾವರಣವಿದ್ರೆ ಎಂಟ್ರಿ ಕೊಡ್ತಾರೆ. ತಾವೇ ಡಿಮ್ಯಾಂಡ್ ಮಾಡಿ ಹಣ ಕೇಳ್ತಾರೆ. ಅವ್ರು ಕೇಳಿದಷ್ಟು ಹಣ ಕೊಡಲಿಲ್ಲ ಅಂದ್ರೆ ಅನುಚಿತ ವರ್ತನೆ ತೋರಿ ದೌರ್ಜನ್ಯ ಎಸೆಗುತ್ತಾರೆ.
ಹೌದು.. ಹೀಗೆ ವಿಜಯನಗರದ ಹಂಪಿ ನಗರದಲ್ಲಿ ಮಂಗಳಮುಖಿಯರು ದೌರ್ಜನ್ಯ ಎಸಗಿದ್ದಾರೆ. ನಿನ್ನೆ ಸಂಜೆ ಬಟ್ಟೆ ಅಂಗಡಿ ಉದ್ಘಾಟನೆ ಮುನ್ನ ಹೋಮಹವನ ಮಾಡುವಾಗ ಸರಿಯಾಗಿ ಪೂಜೆ ಸಮಯಕ್ಕೆ ಆಗಮಿಸಿರೋ ಮಂಗಳಮುಖಿರು 10 ಸಾವಿರ ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಎರಡು ಸಾವಿರ ಕೊಟ್ಟರೂ ಒಪ್ಪದ ಮಂಗಳಮುಖಿಯರ ತಂಡ 10 ಸಾವಿರ ರೂ ಕೊಡದೇ ಇದ್ದಿದ್ದಕ್ಕೆ ಹಲ್ಲೆಗೆ ಯತ್ನಿಸಿರೋದಾಗಿ ಆರೋಪ ಕೇಳಿ ಬಂದಿದೆ.
ಅವಾಚ್ಯ ಶಬ್ದಗಳಿಂದ ನಿಂದಿಸಿ ಅಂಗಡಿ ಮುಂದೆ ಮಂಗಳಮುಖಿಯರ ರಂಪಾಟ ಮಾಡಿದ್ದಾಗಿ ಬಟ್ಟೆ ಅಂಗಡಿ ಮಾಲೀಕ ರಾಘವೇಂದ್ರ ಆರೋಪಿಸಿದ್ದಾರೆ. ನಮ್ಮ ಮೇಲೆ ಅವಾಚ್ಯ ನಿಂದನೆ, ಹಲ್ಲೆಗೆ ಯತ್ನಿಸಿದವರ ಮೇಲೆ ಕ್ರಮಕೈಗೊಳ್ಳುವಂತೆ ರಾಘವೇಂದ್ರ ಮನವಿ ಮಾಡಿದ್ದಾರೆ. ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ದೌರ್ಜನ್ಯದ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ.
PublicNext
08/12/2024 03:39 pm