ಕುಂದಗೋಳ : ಬಡವರ ಮನೆಗಳ ಮೇಲೆ ಹಾಡು ಹಗಲು, ರಾತ್ರೋರಾತ್ರಿ ಪುಂಡ ಪೋಕರಿಗಳು ಕಲ್ಲು, ಮದ್ಯದ ಬಾಟಲಿ, ಸಿಗರೇಟ್, ಬೆಂಕಿ ಗಿರಿ ಕಡ್ಡಿ ಎಸೆಯುತ್ತಲಿದ್ದರೂ ಸ್ಥಳೀಯ ಖಾಕಿ ಏನು ? ಮಾಡುತ್ತಿದೆ ಎಂಬ ಪ್ರಶ್ನೆ ಎದ್ದಿದೆ.
ಹೌದು ! ಕುಂದಗೋಳ ಪಟ್ಟಣದ ಮಸಾರಿ ಪ್ಲಾಟ್ ನಿವಾಸಿಗಳಿಗೆ ಇದೀಗ ಸಾರ್ವಜನಿಕ ವಾಹನ ಓಡಾಟಕ್ಕೆ ನಿರ್ಮಿಸಿದ ರೈಲ್ವೆ ಬ್ರೀಡ್ಜ್ ಸಮಸ್ಯೆ ತಂದರೇ ಅದೇ ಬ್ರಿಡ್ಜ್ ಪುಂಡ ಪೋಕರಿಗಳ ಹಾಟ್ ಸ್ಪಾಟ್ ಆಗಿದೆ.
ಬರ್ತಡೆ ಹೆಸರಲ್ಲಿ 50 ಫೂಟ್ ಎತ್ತರದ ಬ್ರಿಡ್ಜ್ ಮೇಲೆ ಮೋಜು ಮಸ್ತಿ ಮಾಡುವ ಯುವಕರು, ಮದ್ಯ ಪ್ರೀಯರು ಬ್ರೀಡ್ಜ್ ಮೇಲೆ ಮದ್ಯ ಸೇವಿಸಿ, ಸಿಗರೇಟ್ ಸೇವಿಸಿ ಗ್ಲಾಸ್, ಬೆಂಕಿ ಕಡ್ಡಿ, ಕಲ್ಲುಗಳನ್ನು ಸ್ಥಳೀಯ ಮಸಾರಿ ಪ್ಲಾಟ್ ಬಡ ನಿವಾಸಿಗಳ ಮನೆ ಮೇಲೆ ಎಸೆಯುತ್ತಿದ್ದಾರೆ.
ಇನ್ನೂ ಶುಭ ಸಮಾರಂಭಕ್ಕೆ ಹಾಕಿದ ಪೆಂಡಾಲ್'ಗೆ ಬೆಂಕಿ ಕಡ್ಡಿ ಗಿರಿ ಎಸೆದ ಪರಿಣಾಮ ಪೆಂಡಾಲ್ ಸುಟ್ಟೇ ಹೋಗಿದೆ.
ಪಾಪಾ ಕೂಲಿ, ನಾಲಿ, ಮನೆ ಕೆಲಸ ಮಾಡುವ ಬಡ ಕುಟುಂಬಗಳ ಮನೆ ಮೇಲ್ಛಾವಣಿ ಸಿಮೇಂಟ್ ತಗಡು ದುಷ್ಟರು ಕಲ್ಲು ಎಸೆಯುವ ಕಾರಣ ಹಾಳಾಗಿವೆ.
ಇನ್ನೂ ಸ್ಥಳೀಯ ಕುಂದಗೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದರೂ, ಕ್ರಮ ಕೈಗೊಂಡಿಲ್ಲವಂತೆ.
ಸದ್ಯ ಬ್ರಿಡ್ಜ್ ಮೇಲೆ ಸಿಸಿ ಕ್ಯಾಮೆರಾ ವ್ಯವಸ್ಥೆ ಆದಲ್ಲಿ ಪುಂಡ ಪೋಕರಿಗಳ ಹಾವಳಿ ಬ್ರೇಕ್ ಬೀಳಲಿದೆ, ಈ ಬಗ್ಗೆ ಸ್ಥಳೀಯ ಖಾಕಿ ಪಡೆ ಯಾವ ಗಮನಿಸಿ ಗಸ್ತು ಕೈಗೊಳ್ಳಬೇಕಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
07/12/2024 09:47 pm