ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಭರಾಟೆಯಲ್ಲಿ ಕೆಲವರು ತೀರಾ ಕೆಳಮಟ್ಟಕ್ಕೆ ಇಳಿಯುತ್ತಾರೆ. ಸದ್ಯ ಯುವತಿಯೊಬ್ಬಳು ಅರೆಬರೆ ಬಟ್ಟೆ ತೊಟ್ಟು ರಸ್ತೆ ಡಿವೈಡರ್ ಮೇಲೆ ನಿಂತು ರಿಲ್ಸ್ ಮಾಡಿದ್ದಾಳೆ ಸದ್ಯ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಯುವತಿ ನಡೆಗೆ ಗರಂ ಆಗಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ತೋರುವ ಇಂತಹ ಲಜ್ಜೆಗೆಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. ಅಕ್ಕಪಕ್ಕದ ರಸ್ತೆಯಲ್ಲಿ ನಿರಂತರವಾಗಿ ವಾಹನಗಳು ಸಂಚರಿಸುತ್ತಿದ್ದರೂ, ಇದಕ್ಕೆಲ್ಲಾ ಕ್ಯಾರೇ ಅನ್ನದೆ ತುಂಡುಡುಗೆ ತೊಟ್ಟು ರಸ್ತೆ ಡಿವೈಡರ್ ಮೇಲೆ ಮೈ ಚಳಿ ಬಿಟ್ಟು ಅಸಭ್ಯ ರೀತಿಯಲ್ಲಿ ಮುಜ್ರಾ ಡ್ಯಾನ್ಸ್ ಮಾಡಿದ್ದಾಳೆ.
ಈ ಕುರಿತ ವಿಡಿಯೋವನ್ನು venom1s ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಆಕೆ ಜನರನ್ನು ವಿಚಲಿತಗೊಳಿಸುತ್ತಿದ್ದಾಳೆ, ಇದರಿಂದ ರಸ್ತೆ ಅಪಘಾತಗಳು ಸಹ ಉಂಟಾಗಬಹುದು; ಆದಷ್ಟು ಬೇಗ ಮುಜ್ರಾ ನೃತ್ಯವನ್ನು ನಿಷೇಧಿಸಿ” ಎಂಬ ಶೀರ್ಷಿಕೆ ಬರೆದುಕೊಳ್ಳಲಾಗಿದೆ.
PublicNext
07/12/2024 08:16 pm