ಸಿದ್ದಾಪುರ : ದಾಂಡೇಲಿಯ ಅರಣ್ಯ ಸಂಚಾರಿ ದಳದಿಂದ ತಾಲೂಕಿನ ಕ್ಯಾದಗಿ ಸಮೀಪದ ಅಳ್ಳಿಮಕ್ಕಿಯಲ್ಲಿ ಮನೆಯೊಂದರ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಚಿರತೆ ಚರ್ಮ ವಶಕ್ಕೆ ಪಡೆದಿದ್ದಾರೆ.
ಸಿದ್ದಾಪುರ ತಾಲೂಕಿನ ಕ್ಯಾದಗಿ ಗ್ರಾಮದ ನಾರಾಯಣ ನಾಯ್ಕ್ ಅಳ್ಳಿಮಕ್ಕಿ ಎನ್ನುವವರ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಚಿರತೆ ಚರ್ಮ ವಶಕ್ಕೆ ಪಡೆದಿದ್ದಾರೆ.
ಪಿಎಸ್ಐ ಯಲ್ಲಪ್ಪ.ಎಸ್ ನೇತೃತ್ವದಲ್ಲಿ
ಸಿಬ್ಬಂದಿಗಳಾದ ಬಹುಕಾಂತ್ ನಾಯಕ್, ಪ್ರಶಾಂತ್ ನಾಯಕ್.ಗುರುರಾಜ್ ಮಡಿವಾಳ.ಮಂಜುನಾಥ್ ಪಟಗಾರ. ಸತೀಶ್ ಗುಡೆ ಕಾರ್ಯಾಚರಣೆ ನಡೆಸಿ ಚಿರತೆ ಚರ್ಮವನ್ನು ವಶಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Kshetra Samachara
07/12/2024 07:05 pm