ಸಿದ್ದಾಪುರ : ತಾಲೂಕಿನಲ್ಲಿ ಗುರುವಾರ ಸಂಜೆ ಗುಡುಗು ಸಿಡಿಲಿನೊಂದಿಗೆ ಸುರಿದ ಭಾರಿ ಮಳೆಯಿಂದ ಬೇಡ್ಕಣಿ ಗ್ರಾಮದ ದಯಾನಂದ ಗಣಪತಿ ನಾಯ್ಕ ಇವರ ಮನೆಗೆ ಸಿಡಿಲು ಬಡಿದು ಮನೆಯಲ್ಲಿದ್ದ ಟಿವಿ ಹಾಗೂ ವೈರಿಂಗ್ ಸುಟ್ಟು ಹಾನಿಯಾಗಿರುತ್ತದೆ ಅಂದಾಜು 35 ಸಾವಿರ ನಷ್ಟವಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮನೇಲಿದ್ದ ಹಲವು ದಿನ ಬಳಕೆ ವಸ್ತುಗಳು ಸುಟ್ಟು ಹೋಗಿದೆ , ಗೋಡೆ ಬಿರುಕು ಬಿಟ್ಟು ಹಾನಿಯಾಗಿದೆ ಮೀಟರ್ ಬೋರ್ಡ್, ಸ್ವಿಚ್ ಗಳು ಸುಟ್ಟು ಹೋಗಿವೆ , ಇಬ್ಬರಿಗೆ ಸಿಡಿಲಿನ ಶಾಕ್ ತಗುಲಿದೆ ಆದರೆ ಯಾವುದೇ ತೊಂದರೆ ಇಲ್ಲ ಎಂದು ಮನೆಯವರು ತಿಳಿಸಿದ್ದಾರೆ. ಅದ್ರಷ್ಟವಶಾತ್ ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿರುವುದಿಲ್ಲ.
Kshetra Samachara
05/12/2024 09:13 pm