ಕೊಡಗು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕೆ ಸಂಬಂಧಿಸಿದಂತೆ ಇಂದು ಬೆಳ್ಳಂಬೆಳಗ್ಗೆ ಕೊಡಗಿನ ಹಲವು ಕಡೆ ಎನ್ ಐಎ ಅಧಿಕಾರಿಗಳು ಕೊಡಗಿನ ಕೆಲವರ ಮನೆ ಮೇಲೆ ದಾಳಿ ನಡೆಸಿದ್ದು, ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ.
ಮಡಿಕೇರಿಯ ಮುಸ್ತಾಫಾ (ಚಿಲ್ಲಿ) ಹಾಗೂ ಸೋಮವಾರಪೇಟೆಯ ಹೊಸತೋಟ ನಿವಾಸಿ ಜುನೈದ್, ಸೋಮವಾರಪೇಟೆಯ ಕರಿಮೆಣಸು ಕಾಫಿ ವ್ಯಾಪಾರಿ ಹಾಗೂ ಚೌಡ್ಲು ಗ್ರಾಮದ ತೌಶಿಕ್ ಮನೆಗೆ ದಾಳಿ ನಡೆಸಿದ್ದಾರೆ. ಜೊತೆಗೆ ಸುಂಟಿಕೊಪ್ಪದ ಮಾದಾಪುರ ರಸ್ತೆಯ ಮನೆಯೊಂದರ ಮೇಲೂ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ.
ಇಂದು ಮುಂಜಾನೆ ಏಕಕಾಲಕ್ಕೆ ದಾಳಿ ನಡೆಸಿದ ಎನ್ ಐಎ ಅಧಿಕಾರಿಗಳು, ಕೆಲ ಕಾಲ ಮನೆಯಲ್ಲಿ ದಾಖಲೆಗಳ ಶೋಧ ಹಾಗೂ ವಿಚಾರಣೆ ನಡೆಸಿದ್ದು, ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
PublicNext
05/12/2024 04:41 pm